ಚೊಕ್ಕಾಡಿಯ ಶ್ರೀರಾಮ ದೇವಾಲಯದಲ್ಲಿ ಅಷ್ಟಬಂಧ ದ್ರವ್ಯ ಕಲಶ ಮತ್ತು ವಾರ್ಷಿಕೋತ್ಸವ ಫೆ. 23ರಿಂದ ಫೆ. 25ರ ತನಕ ಜರಗಲಿದೆ. ಫೆ. 23ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ, ಹಸಿರುವಾಣಿ ಸಮರ್ಪಣೆ ನಡೆದ ಬಳಿಕ ಶ್ರೀ ರಾಮತಾರಕ ಹವನ, ಶ್ರೀ ದೇವಿ ಬಳಗ ಚೊಕ್ಕಾಡಿಯವರಿಂದ ಭಜನಾ ಕಾರ್ಯಕ್ರಮ ಆರಂಭಗೊಂಡಿತು.
ಮಧ್ಯಾಹ್ನ 12.30 ಕ್ಕೆ ಮಹಾಪೂಜೆ. ಪ್ರಸಾದ ಭೋಜನ, ಸಂಜೆ ಗಂಟೆ 6.00ರಿಂದ ಪ್ರಾರ್ಥನೆ, ವಿವಿಧ ವೈದಿಕ ಕಾರ್ಯಗಳು ನಡೆಯಲಿದೆ. ಸಂಜೆ ಗಂಟೆ 7.00ರಿಂದ ಪದ್ಯಾಣ ಗಣಪತಿ ಭಟ್ ಶಿಷ್ಯರಿಂದ ಗಾನ ವೈಭವ ನಡೆಯಲಿದೆ. ಫೆ. 24ರಂದು ಬೆಳಿಗ್ಗೆ 7.00 ಗಂಟೆಯಿಂದ ಗಣಪತಿ ಹೋಮ, ವಿವಿಧ ವೈದಿಕ ಕಾರ್ಯಗಳು ನಡೆಯಲಿದೆ. ಪೂ. 11.00 ಗಂಟೆಯಿಂದ ಮಧ್ಯಾಹ್ನ ಮಹಾಪೂಜೆ, ಸಂಜೆ ಗಂಟೆ 7.00ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಲಿದೆ.
ಸಂಜೆ 6.00 ಗಂಟೆಯಿಂದ ವಿನಯ ಎಸ್. ಆರ್. ಬೆಂಗಳೂರು ಮತ್ತು ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ. ಫೆ. 25ರಂದು ಬೆಳಿಗ್ಗೆ 7.00 ಗಂಟೆಯಿಂದ ವೈದಿಕ ಕಾರ್ಯಗಳು ನಡೆದು ಬೆಳಿಗ್ಗೆ 8.12ರ ಮೀನ ಲಗ್ನದಲ್ಲಿ ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ, ದ್ರವ್ಯ ಕಲಶಾಭಿಷೇಕ ನಡೆದು ಮಧ್ಯಾಹ್ನ 1.00 ಗಂಟೆಗೆ ಮಹಾಪೂಜೆ ನಡೆಯಲಿದೆ. ಸಂಜೆ 6.00 ಗಂಟೆಗೆ ತಾಯಂಬಕಂ ನಡೆದ ಬಳಿಕ ರಾತ್ರಿ ಗಂಟೆ 9.00ಕ್ಕೆ ಶ್ರೀರಂಗ ಪೂಜೆ, ಶ್ರೀ ದೇವರ ನೃತ್ಯ ಬಲಿ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ ನಡೆಯಲಿದೆ.