ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದ ಜಿಲ್ಲಾ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಹೊಳಪು ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆಯ ವಿತರಣೆಯನ್ನು ಸುಳ್ಯ ತಾಲೂಕು ವ್ಯಾಪ್ತಿಯ ಪಂಚಾಯತ್ ನ ಅಧ್ಯಕ್ಷ ರಿಗೆ ಮತ್ತು ಸದಸ್ಯರಿಗೆ ವಿತರಿಸಲಾಯಿತು. ಈ ಸಂದರ್ಭ ಮಾಜಿ ಜಿ.ಪಂ.ಸದಸ್ಯ ಸತೀಶ್ ಕುಂಪಲ, ರಂಜಿತ್ ಪೂಜಾರಿ ಸುಳ್ಯ, ಬಾಲಕೃಷ್ಣ ಬಣಜಾಲು,ಹರಿಯಪ್ಪ ಸಾಲಿಯಾನ್, ಸತೀಶ್ ಕೋಟ ಮತ್ತಿತರರು ಉಪಸ್ಥಿತರಿದ್ದರು.