ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ದ.ಕ ಜಿ. ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ ಅಜ್ಜಾವರ ಗ್ರಾಮ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ ಪ್ರಯುಕ್ತ ನಮ್ಮ ನಡಿಗೆ – ತ್ಯಾಜ್ಯ ಮುಕ್ತ ಕಡೆಗೆ ನಮ್ಮ ತ್ಯಾಜ್ಯ – ನಮ್ಮ ಹೊಣೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ಪ್ಲಾಸ್ಟಿಕ್ ಇತರೇ ವಸ್ತುಗಳು ಭೂಮಿಯಲ್ಲಿ ಕರಗದೇ ಇರುವ ಒಣ ತ್ಯಾಜ್ಯಗಳನ್ನು ಚೀಲಗಳಲ್ಲಿ ಸಂಗ್ರಹಿಸಿ ಗ್ರಾಮ ಪಂಚಾಯತ್ ನ ಘನ ತ್ಯಾಜ್ಯ ಸಂಪನ್ಮೂಪ ಸಂಗ್ರಹಣಾ ಕೇಂದ್ರಕ್ಕೆ ಮರು ಬಳಕೆಗಾಗಿ ಸಾರ್ವಜನಿಕರು ಒದಗಿಸುವಂತೆ ಅಂಗಡಿ, ಮನೆ, ಶಾಲೆಗಳಿಗೆ ಬ್ಯಾಗ್ ವಿತರಿಸಲಾಯಿತು.
ಅಡ್ಪoಗಾಯ ಬಸ್ ತಂಗುದಾಣ ಬಳಿಯಿಂದ ಅಡ್ಪoಗಾಯ ಪೇಟೆ ತನಕ ಸ್ವಚ್ಛತೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ, ಉಪಾಧ್ಯಕ್ಷೆ ಲೀಲಾ ಮನಮೋಹನ್, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ,ಹಾಗೂ ಆನಂದ ರಾವ್ ಕಾಂತಮಂಗಲ ಮತ್ತು ಧನಲಕ್ಷ್ಮೀ ಮಹಿಳಾ ಮಂಡಲ ಅಜ್ಜಾವರ ಅಧ್ಯಕ್ಷರು ಹಾಗೂ ಗಿರೀಶ್ ಗೊರಡ್ಕ ಉಪಸ್ಥಿತರಿದ್ದರು.