ಕೆ.ವಿ.ಜಿ. ಕ್ಯಾಂಪಸ್: ಸನ್‌ಗ್ರೀನ್ ಸೋಲಾರ್ ಶಕ್ತಿಯೊಂದಿಗೆ ಪರಿಸರವಾಗಿಸೋಣ ಗ್ರೀನ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಕೆ.ವಿ.ಜಿ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್, ಸುಳ್ಯ ಇದರ ವತಿಯಿಂದ ತನ್ನ ಅಧೀನಕ್ಕೊಳಪಟ್ಟ ಕುರುಂಜಿಬಾಗ್ ಕ್ಯಾಂಪಸ್‌ನ ಶಿಕ್ಷಣ ಸಂಸ್ಥೆಗಳ ಕಟ್ಟಡ/ಸಂಕೀರ್ಣಗಳಲ್ಲಿ ಸೌರವಿದ್ಯುತ್ ಫಲಕಗಳನ್ನು ಕೊಲ್ಕತ್ತಾ ಮೂಲದ ಸನ್‌ಗ್ರೀನ್ ಕಂಪೆನಿಯ ಸಹಯೋಗದೊಂದಿಗೆ ಅಳವಡಿಸಲಾಗುತ್ತಿದೆ. ಮೊದಲ ಹಂತದಲ್ಲಿ ಒಟ್ಟು 337 ಕಿ.ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ಗುರಿಯೊಂದಿಗೆ ಯೋಜನೆಯನ್ನು (1 ಕೋಟಿಗೂ ಅಧಿಕ ವೆಚ್ಚದ) ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಕಳೆದ ಎರಡು ವರ್ಷಗಳ ನಿರಂತರ ಪ್ರಯತ್ನಗಳ ಫಲವಾಗಿ ಮತ್ತು ಯಾವುದೇ ಹೂಡಿಕೆಗಳನ್ನು ಮಾಡದೆ ಈ ಯೋಜನೆಯು ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, ಮುಂದಿನ ತಿಂಗಳಲ್ಲಿ ಸೌರ ವಿದ್ಯುತ್ ಪೂರೈಕೆಯಾಗಲಿದೆ. ಸಂಸ್ಥೆಯ ಮಹತ್ತರ ಸಾಧನೆಗಳ ಮೈಲುಗಲ್ಲುಗಳಲ್ಲಿ ಇದು ಕೂಡಾ ಒಂದು. ಸೌರ ವಿದ್ಯುತ್ ಶಕ್ತಿಯು ನವೀಕರಿಸಬಹುದಾದ ಪ್ರಾಕೃತಿಕ ಇಂಧನ ಮೂಲವಾಗಿರುವುದರಿಂದ ಈ ಯೋಜನೆಯಿಂದಾಗಿ ಮುಂದಿನ 25 ವರ್ಷಗಳಲ್ಲಿ ಸರಿ ಸುಮಾರು 10000 ಟನ್ನುಗಳಷ್ಟು ಇಂಗಾಲವನ್ನು ಭೂಮಿ ಅಥವಾ ಪರಿಸರಕ್ಕೆ ಸೇರದಂತೆ ತಡೆ ಹಿಡಿದಂತಾಗುತ್ತದೆ.

ಮುಗಿಯದ ಮತ್ತು ನವೀಕರಿಸಬಹುದಾದ ಶಕ್ತಿ-ಇಂಧನ ಮೂಲಗಳ ಬಳಕೆಗೆ ಹೆಚ್ಚಿನ ಒತ್ತು ಕೊಟ್ಟು ಬರಿದಾಗುತ್ತಿರುವ ಇಂಧನ-ಶಕ್ತಿ ಮೂಲಗಳ ಸಂರಕ್ಷಣೆಗೆ ಮತ್ತು ಪರಿಸರ ಮಾಲಿನ್ಯ ತಡೆಗೆ ಕೆ.ವಿ.ಜಿ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್, ಸುಳ್ಯ ಇದರ ದಿಟ್ಟ ಹೆಜ್ಜೆ ಇದಾಗಿದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾ ಪ್ರಸಾದ್ ಕೆ.ವಿ.ಯವರು ವಿವರಗಳನ್ನು ನೀಡಿದ್ದಾರೆ.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.