ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಸಮಿತಿಯ ವತಿಯಿಂದ ಪತ್ರಕರ್ತ ದಿ. ಚೇತನ್ ರಾಮ್ ಇರಂತಕಜೆ ಸ್ಮಾರಕ ಕೃಷಿ ಮತ್ತು ಗ್ರಾಮೀಣ ಪತ್ರಿಕೋದ್ಯಮ ಕಾರ್ಯಾಗಾರ ಹಾಗೂ ದಿ. ಚೇತನ್ ರಾಮ್ ಸ್ಮಾರಕ ದತ್ತಿನಿಧಿ ಸ್ಥಾಪನೆಯು ಕೊಡಿಯಾಲದಲ್ಲಿ ಮಾ.2ರಂದು ಜರುಗಿತು.
ಕೊಡಿಯಾಲ ಗ್ರಾಮದ ಪ್ರಗತಿಪರ ಕೃಷಿ ಪಂಡಿತ ತಿರುಮಲೇಶ್ವರ ಭಟ್ ಕುರಿಯಾಜೆ ಅವರ ಮನೆಯಲ್ಲಿ ನಡೆದ ಕಾರ್ಯಾಗಾರವನ್ನು ಕೃಷಿಕ ತಿರುಮಲೇಶ್ವರ ಭಟ್ ಅವರು ದೀಪಬೆಳಗಿಸಿ, ಉದ್ಘಾಟಿಸಿ, ಶುಭಹಾರೈಸಿದರು.
ಇದಕ್ಕೂ ಮೊದಲು ತಿರುಮಲೇಶ್ವರ ಭಟ್ ಕುರಿಯಾಜೆ ಅವರ ತೋಟದಲ್ಲಿ ಕೃಷಿ ದರ್ಶನ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಉಮೇಶ್ ಮಣಿಕ್ಕಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಲ್ಲೋರ್ವರಾದ ಬೆಳ್ಳಾರೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಅವರು ಪತ್ರಕರ್ತ ದಿ.ಚೇತನ್ ರಾಮ್ ಸ್ಮಾರಕವಾಗಿ ನಾರ್ಣಕಜೆ ಸ.ಹಿ.ಪ್ರಾ.ಶಾಲೆಯಲ್ಲಿ ಸ್ಥಾಪಿಸಿದ ದತ್ತಿನಿಧಿಗೆ ಚಾಲನೆ ನೀಡಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್, ಕೊಡಿಯಾಲ ಗ್ರಾ.ಪಂ. ಅಧ್ಯಕ್ಷ ಪ್ರದೀಪ್ ರೈ ಅಜ್ರಂಗಳ, ಸದಸ್ಯ ಕರುಣಾಕರ ಆಳ್ವ, ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಪನ್ನೆ, ಬೆಳ್ಳಾರೆ ಡಿ.ಸಿ.ಸಿ.ಬ್ಯಾಂಕ್ ವ್ಯವಸ್ಥಾಪಕ ನಟರಾಜನ್, ಸುಳ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣ ಬೆಟ್ಟ, ಎ.ಪಿ.ಎಂ.ಸಿ. ಸದಸ್ಯ ಸಂತೋಷ್ ಜಾಕೆ, ದಿ.ಚೇತನ್ ರಾಮ್ ಇರಂತಕಜೆ ಅವರ ಪತ್ನಿ ಶ್ರೀಮತಿ ಚೇತನ್ ರಾಮ್,ಕೆ.ಜೆ.ಯು.ಸುಳ್ಯ ತಾಲೂಕು ಘಟಕದ ಕಾರ್ಯದರ್ಶಿ ಯಶ್ವಿತ್ ಕಾಳಮ್ಮನೆ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಕೃಷಿ ಮತ್ತು ಗ್ರಾಮೀಣ ಪತ್ರಿಕೋದ್ಯಮ ವಿಷಯದ ಬಗ್ಗೆ ಪತ್ರಕರ್ತ, ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಅವರಿಂದ ವಿಚಾರಗೋಷ್ಠಿ ನಡೆಯಿತು.
ಕಾರ್ಯಕ್ರಮದಲ್ಲಿ ಪುತ್ತೂರಿನ ಅಂಬಿಕಾ ವಿದ್ಯಾಲಯ ಹಾಗೂ ಸೈಂಟ್ ಫಿಲೋಮಿನಾ ಕಾಲೇಜು, ಸುಳ್ಯದ ಶಾರದಾ ಕಾಲೇಜಿನ ವಿದ್ಯಾರ್ಥಿಗಳು, ಸುಳ್ಯ ಹಾಗೂ ಬೆಳ್ಳಾರೆ ಜ್ಞಾನದೀಪ ಶಿಕ್ಷಣ ಸಂಸ್ಥೆಯ ಶಿಕ್ಷಕಿಯರು, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ಸುಳ್ಯ ತಾಲೂಕು ಘಟಕದ ಪದಾಧಿಕಾರಿಗಳು, ಸುದ್ದಿ ಪತ್ರಿಕಾ ಸಿಬ್ಬಂದಿಗಳು ಹಾಗೂ ಕೊಡಿಯಾಲ ಗ್ರಾಮದ ಕೃಷಿಕರು ಉಪಸ್ಥಿತರಿದ್ದರು. ಪತ್ರಕರ್ತ ಗಣೇಶ್ ಕುಕ್ಕುದಡಿ ಸ್ವಾಗತಿಸಿ, ಪತ್ರಕರ್ತ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.