ಬಳ್ಪ ಗ್ರಾಮದ ಸಂಪ್ಯಾಡಿ ಶ್ರೀ ಯಜ್ಞಮೂರ್ತಿ ನರಸಿಂಹ ದೇವಸ್ಥಾನದಲ್ಲಿ 3ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಮಾ. 4ರಂದು ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭ ಶ್ರೀಪಾದರ ಕೃಪಾಶೀರ್ವಾದದೊಂದಿಗೆ ವೇದಮೂರ್ತಿ ಭಾರತಿರಮಣ ಆಚಾರ್ಯ ಕಾರ್ಕಳ ಇವರ ನೇತೃತ್ವದಲ್ಲಿ ನಡೆಯುತ್ತಿದ್ದು, ಬೆಳಿಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚ, ಗಣಪತಿ ಹೋಮ, ನರಸಿಂಹ ಹೋಮ, ಪಂಚವಿಶಂತಿ, ನರಸಿಂಹ ದೇವರಿಗೆ ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ವಿಷ್ಣು ಸಹಸ್ರನಾಮ ಪಾರಾಯಣ ನಡೆದ ಬಳಿಕ ವಿವಿಧ ವೈದಿಕ ಕಾರ್ಯಗಳು ನೆರವೇರಿತು.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ 5.00 ಗಂಟೆಯಿಂದ ಶಿವಳ್ಳಿ ಸಂಪನ್ನ ಪಂಜ ವಲಯ ಸದಸ್ಯರಿಂದ ಬಳಿಕ ಸಿದ್ಧಿವಿನಾಯಕ ಭಜನಾ ಮಂಡಳಿ ಸಂಪ್ಯಾಡಿ, ಬೀದಿಗುಡ್ಡೆ ಇವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ರಾತ್ರಿ ಮುಖ್ಯ ಪ್ರಾಣ ದೇವರಿಗೆ ರಂಗಪೂಜೆ, ದುರ್ಗಾಪೂಜೆ, ವೈದಿಕ ಮಂತ್ರಾಕ್ಷತೆ ಬಳಿಕ ಪ್ರಸಾದ ವಿತರಣೆ ನಡೆಯಲಿದೆ.