ದ.ಕ ಜಿಲ್ಲಾ ಪುತ್ತೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾಗಿ ಕೌಶಿಕ್ ಗೌಡ ಕುದ್ವ ಆಯ್ಕೆಯಾಗಿದ್ದಾರೆ.
ಮಾಜಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ ಹಾಗೂ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ , ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪ್ರಸಾದ್ , ಮಾಜಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರ ಶಿಫಾರಸ್ಸಿನಂತೆ ಎನ್.ಎಸ್.ಯು.ಐ ನ ಜಿಲ್ಲಾಧ್ಯಕ್ಷ ಶಾವಾದ್ ಸುಳ್ಯ ಹಾಗೂ ರಾಜ್ಯ ಎನ್.ಎಸ್.ಯು.ಐ ಫಾರೂಕ್ ನೇಮಕಾತಿ ಆದೇಶ ಹೊರಡಿಸಿದ್ದಾರೆ .ಕೌಶಿಕ್ ಗೌಡರವರು ಎನ್.ಎಸ್.ಯು.ಐ ಕಾಲೇಜು ಘಟಕದ ಅಧ್ಯಕ್ಷರಾಗಿ , ಎನ್.ಎಸ್.ಯು.ಐ ಪುತ್ತೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ .ದಕ್ಷಿಣ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಯಾಗಿದ್ದಾರೆ.ಇವರು ಪುತ್ತೂರು ಸಂತ ಫಿಲೋಮಿನ ಕಾಲೇಜಿನ ತೃತೀಯ ವರ್ಷದ ಬಿಬಿಎ ವಿದ್ಯಾರ್ಥಿಯಾಗಿದ್ದಾರೆ. ಇವರು ಪಂಜದ ಕುದ್ವ ಲೋಕನಾಥ ಕುದ್ವ ಮತ್ತು ಶ್ರೀಮತಿ ಮೋಹಿನಿರವರ ಪುತ್ರ.