ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜ. 26, 27, 28 ರಂದು ನಡೆದ ಜಾತ್ರೋತ್ಸವದ ಖರ್ಚುವೆಚ್ಚದ ಲೆಕ್ಕಾಚಾರ, ದೇವಸ್ಥಾನದಲ್ಲಿ ನಡೆಯಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಭೆ ನಡೆಯಿತು.
ಸಭಾಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಕೆ.ಉಮೇಶ್ರವರು ವಹಿಸಿದ್ದರು. ವೇದಿಕೆಯಲ್ಲಿ ಸಮಿತಿ ಸದಸ್ಯರಾದ ಡಿ.ಎಸ್.ಗಿರೀಶ್, ಆನಂದ ನಡುಮುಟ್ಲು, ನಾರಾಯಣ ಕಾಯರ್ತೋಡಿ, ಕೃಷ್ಣ ಬೆಟ್ಟ, ನಮಿತಾ ಕುಸುಮಾಧರ ಉಪಸ್ಥಿತರಿದ್ದರು.
ದೇವಸ್ಥಾನದ ಸೇವಾ ಸಮಿತಿ ಸಂಚಾಲಕರಾಗಿ ನವೀನ್ ಕುದ್ಪಾಜೆಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಲ್ಲದೆ ಮುಂದೆ ನಡೆಯುವ ಜಾತ್ರೋತ್ಸವಕ್ಕೆ ದೇವಸ್ಥಾನಕ್ಕೆ ಸಂಬಂಧಪಟ್ಟ ಮನೆಯವರು ದೇಣಿಗೆ ನೀಡಬೇಕೆಂದು ನಿರ್ಣಯಿಸಲಾಯಿತು. ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಾರಾಯಣ ಕೇಕಡ್ಕ, ನವೀನ್ ಕುದ್ಪಾಜೆ, ಪ್ರಶಾಂತ್ ಕಾಯರ್ತೋಡಿ, ದಾಮೋದರ ಮಂಚಿ, ಚಂದ್ರಶೇಖರ ಅಡ್ಪಂಗಾಯ, ಚಿದಾನಂದ ಕುದ್ಪಾಜೆ, ನ.ಪಂ. ಸದಸ್ಯೆ ಪ್ರವಿತಾ ಪ್ರಶಾಂತ್, ದಾಮೋದರ ಅಟಲ್ನಗರ, ವಿಠಲ ಸರ್ವೆಯರ್, ಜಯಂತಿ, ಸುರೇಶ್ ಅರಂಬೂರು, ಪಿ.ಜಿ.ನಾರಾಯಣ ಮೊದಲಾದವರು ಸಲಹೆ ಸೂಚನೆ ನೀಡಿದರು. ಪಿ.ಕೆ. ಉಮೇಶ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ನಮಿತಾ ಕುಸುಮಾಧರ ವಂದಿಸಿದರು.