ಕುಕ್ಕೆ ಸುಬ್ರಹ್ಮಣ್ಯ ದೇವಳದ ನಿವೃತ್ತ ನೌಕರರ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ ಮಾ.6 ರಂದು ನಡೆಯಿತು.
ಸಚಿವ ಎಸ್.ಅಂಗಾರ ಅಭಿನಂದಿಸಿ ಮಾತನಾಡುತ್ತಾ ಕಾರ್ಯತತ್ಪರತೆಯ ಪ್ರಾಮಾಣಿಕ ಸೇವೆಯು ಸದಾ ಭಗವಂತನ ಆಶೀರ್ವಾದಕ್ಕೆ ಪೂರಕವಾಗಿರುತ್ತದೆ. ನಿವೃತ್ತಿ ಪಅನ್ನುವುದು ಸರಕಾರಿ ಸೇವೆಯ ಅವಿಭಾಜ್ಯ ಅಂಗ. ಸೇವಾವಧಿಯಲ್ಲಿನ ಸೇವಾಕಾಂಕ್ಷಿತ್ವವು ನಿವೃತ್ತಿಯ ನಂತರವೂ ಗೌರವವನ್ನು ನೀಡುತ್ತದೆ.ಪುಣ್ಯ ಕ್ಷೇತ್ರದಲ್ಲಿ ನೌಕರಿ ಮಾಡಲು ಅವಕಾಶ ದೊರಕಿರುವುದು ಪುಣ್ಯದ ಫಲ.ಪ್ರಾಮಾಣಿಕ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡರೆ ಶ್ರೇಷ್ಠತೆ ದೊರಕುತ್ತದೆ. ನೌಕರರು ಮತ್ತು ಆಡಳಿತ ವ್ಯವಸ್ಥೆಯ ಒಳಗೆ ಒಮ್ಮತವಿದ್ದರೆ ಅಭಿವೃದ್ಧಿ ಸಾಧ್ಯ. ಶ್ರೀ ದೇವಳದಲ್ಲಿ ನೌಕರರ ಅಭಿವೃದ್ಧಿಗೆ ಮತ್ತು ಅವರ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಳಿಸಿದರು.
ಈ ಸಂದರ್ಭ ಡಾ.ಯತೀಶ್ ಉಳ್ಳಾಲ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ದೇವಳದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ದೇವಪ್ಪ, ರಾಮಕ್ಕ.ಡಿ, ಕೆ.ಎನ್.ಪಾರ್ವತಿ, ಚಂದ್ರ, ರುಕ್ಮಿಣಿ, ಎಂ.ಗೋಪಾಲಕೃಷ್ಣ ಎಡಪಡಿತ್ತಾಯ, ಎ.ವಿ.ನಾರಾಯಣ, ಸೀತಮ್ಮ.ಕೆ, ಬಾಬು.ಎ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಶ್ರೀ ದೇವಳದ ನಿಕಟಪೂರ್ವ ಆಡಳಿತಾಧಿಕಾರಿ ಮತ್ತು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.