ಸಮಾಜ ಕಲ್ಯಾಣ ಇಲಾಖೆ ಸುಳ್ಯ ಇಲ್ಲಿಗೆ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಹಾಗೂ ಮಾಜಿ ಮಂತ್ರಿಗಳಾದ ಶಿವಣ್ಣ ಕೋಟೆ ಇವರು ಮಾ. 8 ರಂದು ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿ ಕಚೇರಿಯ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿದರು.
ಸಮಾಜ ಕಲ್ಯಾಣ ಇಲಾಖೆ ದ.ಕ ಜಿಲ್ಲೆ ಇದರ ಉಪನಿರ್ದೇಶಕ ಯೋಗೀಶ್ ಜೊತೆಗಿದ್ದರು. ಚಂದ್ರಶೇಖರ್ ಪೇರಾಲ್ ಸಹಾಯಕ ನಿರ್ದೇಶಕರು ಸ್ವಾಗತಿಸಿದರು. ನಿಲಯ ಮೇಲ್ವಿಚಾರಕರಾದ ಬಾಲಕೃಷ್ಣ,ಮಾಧವ, ಶೀಮತಿ ಕಾವ್ಯ, ಆರ್ಷಿಯಾ,ಹಾಗೂ ಕಚೇರಿ ಸಹಾಯಕರಾದ ರಜನಿ ಹಾಗೂ ಚೈತ್ರ ಉಪಸ್ಥಿತರಿದ್ದರು.