ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಾಳಿಲ ಮುಪ್ಪೇರ್ಯ ಒಕ್ಕೂಟದಿಂದ ಸೀಮಂತ ಗೌರವ ಕಾರ್ಯಕ್ರಮ ನೆರವೇರಿಸಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಾಳಿಲ ಮುಪ್ಪೇರ್ಯ ಒಕ್ಕೂಟದ ಮೇಲ್ವಿಚಾರಕ ಮುರಲೀಧರ,ಉಪಾಧ್ಯಕ್ಷರಾದ ಶ್ರೀಮತಿ ಜಾನಕ್ಕಿ ಪಲ್ಲತ್ತಡ್ಕ,ಕೋಶಾಧಿಕಾರಿ ಮಾದಪ್ಪ ಗೌಡ ಹಾಗು ಸೇವಾ ಪ್ರತಿನಿಧಿ ಶ್ರೀಮತಿ ರತ್ನಾವತಿ ಕಾಯಾರ ದೊಡ್ಡಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎರಡು ವರ್ಷಗಳಿಂದ ಸೇವಾಪ್ರತಿನಿಧಿಯಾಗಿ ಬಾಳಿಲ ಮುಪ್ಪೇರ್ಯ ಒಕ್ಕೂಟದಲ್ಲಿ ಕೆಲಸ ಮಾಡುತ್ತಿರುವ ಶ್ರೀಮತಿ ರತ್ನಾವತಿ ಕಾಯಾರ ದೊಡ್ಡಮನೆ ಇವರಿಗೆ “ಸೀಮಂತ ಗೌರವ” ಮಹಿಳೆಯರು ನೆರವೇರಿಸಿದರು.
ಸಂಘದ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಮೇಲ್ವಿಚಾರಕರಾದ ಮುರಲೀಧರರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಂಘದ ಸದಸ್ಯರಾದ ಶ್ರೀಮತಿ ಹೇಮಲತ ಸ್ವಾಗತಿಸಿದರು. ಶ್ರೀಮತಿ ತ್ರಿವೇಣಿ ಕೆ.ವಿ. ವಂದಿಸಿದರು. ಶ್ರೀಮತಿ ಜಾಹ್ನವಿ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು.