Breaking News

ಬಡ್ಡಡ್ಕ ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವ ಸಂಪನ್ನ- ಸಮಾರೋಪ ಸಮಾರಂಭ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಬಡ್ಡಡ್ಕ-ಕಲ್ಲಪಳ್ಳಿ ಅಯ್ಯಪ್ಪ ಭಜನಾ ಮಂದಿರದ ಪುನ: ಪ್ರತಿಷ್ಠಾ ಮಹೋತ್ಸವದ ಸಮಾರೋಪ ಸಮಾರಂಭ ಮಾ. 7 ರಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪಿ.ಕೆ.ಬಾಲಚಂದ್ರ ಪೆರುಮುಂಡ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಹೋತ್ಸವದ ಸವಿ ನೆನಪಿಗಾಗಿ ಹೊರತಂದಿರುವ “ಸಾನಿಧ್ಯಂ ” ಸ್ಮರಣ ಸಂಚಿಕೆಯನ್ನು ನಿವೃತ್ತ ಪ್ರಾಂಶುಪಾಲ ಕೆ .ಆರ್. ಗಂಗಾಧರ ರವರು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಕುಡೆಕಲ್ಲು, ಜಿ.ಪಂ ಸದಸ್ಯ ಹರೀಶ್ ಕಂಜಿಪಿಲಿ, ಮಡಿಕೇರಿ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ, ಎ.ಪಿ ಯಂ.ಸಿ.ನಿರ್ದೇಶಕ ಜಯಪ್ರಕಾಶ ಕುಂಚಡ್ಕ, ಆಲೆಟ್ಟಿ ಸೊಸೈಟಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಆಲೆಟ್ಟಿ ಸದಾಶಿವ ದೇವಸ್ಥಾನದ ಅಧ್ಯಕ್ಷ ಪ್ರಸನ್ನ ಕೆ.ಸಿ.ಬಡ್ಡಡ್ಕ, ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷ ಕೆ.ಅಶೋಕ ಪ್ರಭು, ಭಜನಾ ಮಂದಿರದ ಜೀರ್ಣೋದ್ಧಾರ.ಸ.ಗೌರವಾಧ್ಯಕ್ಷ ಡಾ |ಎನ್. ಎ.ಜಯದೀಪ್, ಅಮರ ಕ್ರೀಡಾ ಕಲಾ ಸಂಘದ ಅಧ್ಯಕ್ಷ ಕೆ.ವಿ. ಪ್ರಕಾಶ್, ಧ.ಗ್ರಾ. ಯೋಜನೆಯ ಪಿ.ಯು. ರಾಧಾಕೃಷ್ಣ, ಜನನಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಚಿನ್ ಗುಂಡ್ಯ, ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಹರೀಶ ರಂಗತ್ತಮಲೆ, ಕಾರ್ಯದರ್ಶಿ ಕೆ.ಕಮಲಾಕ್ಷ ಬಡ್ಡಡ್ಕ, ಗಂಗಾಧರ ಪತ್ತುಕುಂಜ, ಪೆರಾಜೆ ಪಂ.ಮಾಜಿ ಸದಸ್ಯ ನಂಜಪ್ಪ ನಿಡ್ಯಮಲೆ, ಸಮಿತಿ ಕೋಶಾಧಿಕಾರಿ ಗಿರಿಯಪ್ಪ ನಾಯ್ಕ ಎಲಿಕ್ಕಳ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಂದಿರದ ಜೀರ್ಣೋದ್ಧಾರ ಕಾರ್ಯದ ಶ್ರಮದಾನದಲ್ಲಿ ತೊಡಗಿಸಿಕೊಂಡವರನ್ನು ಗುರುತಿಸಿ ಗೌರವಿಸಲಾಯಿತು. ಖ್ಯಾತ ಭಾಗವತರಾದ ಶ್ರೀಮತಿ ಅಮೃತ ಅಡಿಗರವರನ್ನು ಗೌರವಿಸಲಾಯಿತು.ಸಾನಿಧ್ಯಂ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕ ದಯಾನಂದ ಪತ್ತುಕುಂಜ ಸಂಚಿಕೆಯ ಕುರಿತು ಮಾತನಾಡಿದರು. ಶ್ರೀರಕ್ಷಾ ಮತ್ತು ಅಭಿರಾಮ್ ಕಲ್ಲುರಾಯ ಪ್ರಾರ್ಥಿಸಿದರು. ನ್ಯಾಯವಾದಿ ಜಗದೀಶ ಕಾಪುಮಲೆ ಸ್ವಾಗತಿಸಿದರು. ಪತ್ರಕರ್ತ ಶಿವಪ್ರಸಾದ್ ಆಲೆಟ್ಟಿ ವಂದಿಸಿದರು. ಪಂ.ಸದಸ್ಯ ಶಿವಾನಂದ ರಂಗತ್ತಮಲೆ ,ದಯಾನಂದ ಪತ್ತುಕುಂಜ ಕಾರ್ಯಕ್ರಮ ನಿರೂಪಿಸಿದರು. ಮಹೋತ್ಸವದ ಎಲ್ಲಾ ಸಮಿತಿಯ ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದರು. ಊರ ಪರ ಊರ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ರಾತ್ರಿ ಶ್ರೀದೇವರಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ಈ ಸಂದರ್ಭ ವಿಶೇಷವಾಗಿ ಸಿಡಿ ಮದ್ದಿನ ಪ್ರದರ್ಶನ ಹಾಗೂ ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ ಇವರ ಪ್ರಾಯೋಜಕತ್ವದಲ್ಲಿ “ಮಹಿಮೆದ ಮಹಮ್ಮಾಯಿ ” ಎಂಬ ತುಳು ಯಕ್ಷಗಾನ ಪ್ರದರ್ಶನಗೊಂಡಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.