‘ಕೃಷಿ ವಿಜ್ಞಾನಿಗಳಿಂದ ತರಬೇತಿ’
ಆಧುನಿಕ ,ಮಿಶ್ರ ಕೃಷಿ ಪದ್ಧತಿ ಅಗತ್ಯ : ಸುಬ್ರಹ್ಮಣ್ಯ ಕುಳ
ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ, ಪ್ರಾದೇಶಿಕ ಕೇಂದ್ರ ವಿಟ್ಲ ಮತ್ತು ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ ಕಲ್ಲಿಕೋಟೆ ಇವುಗಳ ಸಹಭಾಗಿತ್ವದಲ್ಲಿ ಪಂಜ ಪ್ರಾ.ಕೃ.ಪ.ಸ.ಸಂಘ, ಪಂಬೆತ್ತಾಡಿ ಪ್ರಾ.ಕೃ.ಪ.ಸ.ಸಂಘ ಮತ್ತು ಕಲ್ಮಡ್ಕ ಪ್ರಾ.ಕೃ.ಪ.ಸ.ಸಂಘ ಇವುಗಳ ಆಶ್ರಯದಲ್ಲಿ ಅಡಿಕೆ ಬೆಳೆಯಲ್ಲಿ ಉತ್ತಮ ಬೇಸಾಯ ಕ್ರಮಗಳು ಮತ್ತು ಅಡಿಕೆಯೊಂದಿಗೆ ಬಹು ಬೆಳೆ ಕೃಷಿ ಪದ್ಧತಿ ಕುರಿತು ರೈತರಿಗೆ ಮಾಹಿತಿ ಕಾರ್ಯಕ್ರಮ ಮಾ. 9.ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ನಡೆಯಿತು.
ಪಂಜ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಉದ್ಘಾಟಿಸಿ ಮಾತನಾಡಿ ” ಕೃಷಿ ಪದ್ಧತಿ ನಮ್ಮ ಜೀವನದ ಅವಿಭಾಜ್ಯ ಅಂಗ. ಬೆಲೆ ಏರಿಕೆಗೆ ಮರುಳಾಗಿ ಏಕ ಕೃಷಿಯತ್ತ ಹೋಗಕೂಡದ, ಅಧುನಿಕ,ಮಿಶ್ರ ಕೃಷಿ ಪದ್ಧತಿ ಅಗತ್ಯ’ ಎಂದು ಅವರು ಹೇಳಿದರು.
ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಾಧವ ಗೌಡ ಜಾಕೆ ಸಭಾಧ್ಯಕ್ಷತೆ ವಹಿಸಿದ್ದರು.
ತರಬೇತುದಾರ ಕೃಷಿ ವಿಜ್ಞಾನಿ ಡಾ.ನಾಗರಾಜ್ ಎನ್ ಆರ್ ,ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಜೋಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಗತಿ ಪರ ಕೃಷಿಕೆ ಶ್ರೀಮತಿ ಯಶೋಧಾ ಕೆ ಎಸ್ ರವರನ್ನು ಸನ್ಮಾನಿಸಲಾಯಿತು. ಸಹಕಾರ ಸಂಘಗಳ ಪರವಾಗಿ ಕೃಷಿ ವಿಜ್ಞಾನಿ ಡಾ.ನಾಗರಾಜ್ ಎನ್ ಆರ್ ರವರನ್ನು
ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸುದರ್ಶನ್ ಪಟ್ಟಾಜೆ ಪ್ರಾರ್ಥಿಸಿದರು.ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ ಶೆಟ್ಟಿ ಸ್ವಾಗತಿಸಿದರು. ಕೃಷಿ ವಿಜ್ಞಾನಿ ಡಾ.ನಾಗರಾಜ್ ಎನ್ ಆರ್ ಪ್ರಾಸ್ತಾವಿಕ ಮಾತನಾಡಿದರು.
ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು. ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ್ ಪಲ್ಲೋಡಿ ವಂದಿಸಿದರು.
ತರಬೇತಿ ಕಾರ್ಯಾಗಾರ : ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರ ಅನಿಸಿಕೆ, ಬೋರ್ಡೋ ದ್ರಾವಣ ತಯಾರಿಕಾ ಪ್ರಾತ್ಯಕ್ಷಿಕೆ, ರಸ ಪ್ರಶ್ನೆ ಕಾರ್ಯಕ್ರಮ ನಡೆಯಲಿದೆ.ಕೃಷಿ ವಿಜ್ಞಾನಿಗಳಾದ ಡಾ.ನಾಗರಾಜ್ ಎನ್ ಆರ್,ಡಾ.ರಾಜ್ ಕುಮಾರ್ ತರಬೇತಿ ನೀಡಲಿದ್ದಾರೆ.