Breaking News

ರಮಿತಾ ಶೈಲೇಂದ್ರರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸುಳ್ಯದಲ್ಲಿ ಸಹಾಯಕ ಪೊಲೀಸ್ ನಿರೀಕ್ಷಕರಾಗಿರುವ ರಘುರಾಮ್ ಹೆಗ್ಡೆ ಮತ್ತು ಶ್ರೀಮತಿ ರಾಜೇಶ್ವರಿ ದಂಪತಿಯ ಪುತ್ರಿ ಕಾರ್ಕಳದಲ್ಲಿರುವ ರಮಿತಾ ಶೈಲೇಂದ್ರ ರಾವ್ ಅವರಿಗೆ ಮಹಿಳಾ ಅಭಿವೃದ್ಧಿ ಕಾರ್ಯಗಳಿಗಾಗಿ ರಾಜ್ಯ ಸರ್ಕಾರ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಘೋಷಿಸಿದ್ದು, ನಾಳೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಮೂಲತಃ ಪುತ್ತೂರಿನ ಉರ್ಲಾಡಿಯ ಇವರು ಕಾಲೇಜು ದಿನಗಳಿಂದ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡವರು. ಕಳೆದ ಒಂದು ವರ್ಷದಿಂದ ಕಾರ್ಕಳದ ರೋಟರಿ ಆನ್ಸ್ ಕ್ಲಬ್‌ನ ಅಧ್ಯಕ್ಷೆಯಾಗಿರುವ ರಮಿತಾ ತನ್ನ ಪತಿ ಶೈಲೇಂದ್ರ ರಾವ್ ಅವರ ಉತ್ತೇಜನ ಹಾಗೂ ಪ್ರೋತ್ಸಾಹದಿಂದ ರೋಟರಿ ಆನ್ಸ್ ಕ್ಲಬ್‌ನ ಮೂಲಕ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ಆಯೋಸುತ್ತಿದ್ದಾರೆ. ಈಗಾಗಲೇ ಅವರ ನೇತೃತ್ವದಲ್ಲಿ ೪೫೦ಕ್ಕೂ ಅಧಿಕ ಜನೋಪಯೋಗಿ, ಪರಿಸರ ಸ್ನೇಹಿ ಕಾರ್ಯಕ್ರಮಗಳು ನಡೆದಿದ್ದು ಮುಂದಿನ ಜೂನ್ ಅಂತ್ಯದ ತನಕ ತಾನು ನಿರ್ಗಮಿಸುವ ಮೊದಲು ೫೦೦ಕ್ಕೂ ಮಿಗಿಲು ಕಾರ್ಯಕ್ರಮ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ.

ವಿದ್ಯುತ್ ಸಂಪರ್ಕವಿಲ್ಲದ ಓದುವ ಮಕ್ಕಳಿರುವ ತಾಲ್ಲೂಕಿನ ೩೨ ಮನೆಗಳಿಗೆ ‘ಯುವವಾಹಿನಿ’ ಎಂಬ ಸಂಘಟನೆಯ ಸಹಯೋಗದಲ್ಲಿ ‘ಕರುಣಾಳು ಬಾ ಬೆಳಕು’ ಕಾರ್ಯಕ್ರಮದಡಿಯಲ್ಲಿ ಸೋಲಾರ್ ಘಟಕಗಳ ವ್ಯವಸ್ಥೆ, ಮನೆಗಳಲ್ಲಿ ಉತ್ಪನ್ನವಾಗುವ ಅಡುಗೆ ಮನೆಯ ತ್ಯಾಜ್ಯಗಳನ್ನು ತೋಟಕ್ಕೆ ಬಳಸಲು ಪುರಸಭೆಯ ನೆರವಿನಲ್ಲಿ ೧೦೮ ಮನೆಗಳಿಗೆ ಪೈಪ್ ಕಂಪೋಸ್ಟ್‌ಗಳ ಅಳವಡಿಕೆ, ಕಾನ್ಸರ್‌ನಿಂದಾಗಿ ಕೂದಲು ಕಳೆದುಕೊಂಡಿರುವ ಮಹಿಳೆಯೊಬ್ಬರಿಗೆ ಕೇಶದಾನ, ಇದೇ ಉದ್ದೇಶಕ್ಕಾಗಿ ಇತರ ಮಹಿಳೆಯರು ಕೇಶದಾನ ನಡೆಸುವಂತೆ ಪ್ರೇರಣಾದಾಯಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ರಸ್ತೆಯಲ್ಲಿ ಅಲ್ಲಲ್ಲಿ ತಿರುಗಾಡುವ ಸುಮಾರು ೮ ಹೆಣ್ಣು ನಾಯಿಗಳನ್ನು ದತ್ತು ಪಡೆದದ್ದು, ೫೨ ಬೀದಿ ನಾಯಿಗಳಿಗೆ ಪಶುಸಂಗೋಪನಾ ಇಲಾಖೆಯ ಸಹಕಾರದೊಂದಿಗೆ ಚುಚ್ಚುಮದ್ದು ನೀಡಿಸಿದ್ದು, ಉಡುಪಿ ಜಿಲ್ಲೆಯ ಸ್ವರ್ಣಾನದಿಯನ್ನು ಉಳಿಸಿಕೊಳ್ಳಲು ಮಣಿಪಾಲದ ‘ಸ್ವರ್ಣಾರಾಧನೆ ಕಾರ್ಯಕ್ರಮ’ಕ್ಕೆ ಕಾರ್ಕಳದ ಪ್ರತಿನಿಧಿಯಾಗಿ ಕೈ ಜೋಡಿಸಿ ಕಾರ್ಕಳದ ಸ್ವಚ್ಛ ಬ್ರಿಗೇಡ್ ಮೊದಲಾದ ಸಂಘಟನೆಗಳ ೧೦೮ ಮಂದಿಯ ಸಹಾಯದಿಂದ ಜೋಗುಲಬೆಟ್ಟು ಎಂಬಲ್ಲಿನ ಡ್ಯಾಂನ್ನು ಸ್ವಚ್ಛಗೊಳಿಸಿದ್ದಾರೆ.
ಕೊರೊನಾ ಸಮಯದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಕೃಷ್ಣಾಷ್ಟಮಿ ಸ್ಪರ್ಧೆ, ಗಣೇಶ ಚತುರ್ಥಿ ಸ್ಪರ್ಧೆ, ಶಿಕ್ಷಕ ದಿನಾಚರಣೆ, ನವರಾತ್ರಿ ಆಚರಣೆಗಳು, ತಾಯಿ – ಮಗು ಸ್ಪರ್ಧೆ ನಡೆಸಿದ್ದು, ಮನೆಯ ಸುತ್ತಲಿನಲ್ಲಿ ಗಿಡಮರಗಳನ್ನು ನೆಟ್ಟು ಬೆಳೆಸಿದವರಿಗೆ ಬಹುಮಾನ ಆಯೋಜನೆ, ನೀರಿನ ಉಳಿತಾಯದ ಕುರಿತು ಇಮೇಜ್ ಸ್ಪರ್ಧೆ, ಕಸದಿಂದ ರಸ ಸ್ಪರ್ಧೆ, ಸಾಮಾಜಿಕ ಜಾಲತಾಣದ ಮೂಲಕ ಭಗವದ್ಗೀತೆಯ ವಾಚನ ವೈಶಿಷ್ಟ್ಯಗಳ ಪ್ರಚಾರ, ಮಹಿಳೆಯರ ಅಭಿವೃದ್ಧಿಗಾಗಿ ಸ್ವಸಹಾಯ ಸಂಘದ ಸದಸ್ಯೆಯರಿಗೆ ಇಲಾಖೆಯ ಮೂಲಕ ತರಬೇತಿ, ಪುರಸಭಾ ವಾರ್ಡಗಳ ವ್ಯಾಪ್ತಿಯ ಜನರಿಗೆ ವಕೀಲರ ಮೂಲಕ ಕಾನೂನು ಮಾಹಿತಿ. ಮಾತ್ರವಲ್ಲ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನೂ ನಡೆಸಿದ್ದಾರೆ.

ಮಹಿಳಾ ದಿನಾಚರಣೆಯ ಅಂಗವಾಗಿ ತಾಲೂಕಿನ ಸ್ವಾವಲಂಬಿ ಮಹಿಳಾ ವ್ಯಾಪಾರಿಗಳಿಗೆ ವ್ಯಾಪಾರ ಮಳಿಗೆಗಳ ಪ್ರದರ್ಶನ ಹಾಗೂ ಮಾರಾಟದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.