ಪಯಸ್ವಿನಿ ನದಿಗೆ ತೋಟೆ ಹಾಕಿದ ಪರಿಣಾಮ ಹೊಳೆಯಲ್ಲಿ ಸತ್ತು ತೇಲುತ್ತಿದೆ ನೂರಾರು ಮೀನುಗಳು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಪಯಸ್ವಿನಿ ನದಿಗೆ ತೋಟೆಹಾಕಿದ ಪರಿಣಾಮ ನೂರಾರು ಮೀನುಗಳು ಸತ್ತಿದ್ದು ಇದೀಗ ಅದು ಕೊಳೆತು ನಾರುತ್ತಿದೆ. ಇತ್ತೀಚೆಗಿನ ಕೆಲವು ದಿನಗಳಿಂದ ಪಯಸ್ವಿನಿ ನದಿಯ ನಾಗಪಟ್ಟಣ, ಭಸ್ಮಡ್ಕ ಸೇರಿದಂತೆ ಮತ್ತಿತರ ಕಡೆಗಳಲ್ಲಿ ತೋಟೆ ಹಾಕಿ ಮೀನು ಹಿಡಿಯಲಾಗುತ್ತಿದೆ.

ಭಸ್ಮಡ್ಕದಲ್ಲಿ ತೋಟೆ ಹಾಕಿದ ಪರಿಣಾಮ ಮೀನುಗಳು ಸತ್ತಿವೆ. ಈ ಮೀನುಗಳು ಸತ್ತು ಈಗ ನೀರಿನಲ್ಲಿ ತೇಲುತ್ತಿವೆ.

ನದಿಯಲ್ಲಿ ತೋಟೆ, ಇನ್ನಿತರ ರಾಸಾಯನಿಕ ಬಳಸಿ ಮೀನು ಹಿಡಿಯಲಾಗುತ್ತಿದೆ. ಇದೀಗ ಮೀನುಗಳು ಸತ್ತು ತೇಲುತ್ತಿದ್ದು ನಾರುತ್ತಿದೆ. ನೀರು ಕೂಡಾ ಕಲುಷಿತವಾಗುತ್ತಿದೆ.

ನದಿಯಿಂದ ಮೀನು ಹಿಡಿಯುವವರ ಮೇಲೆ ಸ್ಥಳೀಯಾಡಳಿತ, ಪೋಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಬೇಕು ಎಂದು ಸ್ಥಳೀಯರಾದ ದಿನೇಶ್ ಎಂಬವರು ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪಯಸ್ವಿನಿಗೆ ತೋಟೆ ಹಾಕಿ ಮೀನು ಹಿಡಿಯುವ ಬಗ್ಗೆ ನಮಗೆ ದೂರು ಬಂದಿದೆ. ಪೋಲೀಸ್ ಠಾಣೆಗೂ ಮಾಹಿತಿ ನೀಡಿದ್ದೇವೆ. ಆದರೆ ಯಾರು ತೋಟೆ ಹಾಕುತ್ತಾರೆ ಎಂದು ಗೊತ್ತಾಗಿಲ್ಲ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಬೇಕು. ತೋಟೆ ಹಾಕಲು ವಾಹನದಲ್ಲಿ ಬಂದರೆ ವಾಹನವನ್ನು ಹಿಡಿದು ಮಾಹಿತಿ ನೀಡಿ ಕ್ರಮ ಜರುಗಿಸಲಾಗುವುದು ಎಂದು ಸ್ಥಳೀಯ ನ.ಪಂ. ಸದಸ್ಯ ಸುಧಾಕರ ಕುರುಂಜಿಭಾಗ್ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.