ಶ್ರೀ ಕ್ಷೇತ್ರಕ್ಕೆ ಕೆಮ್ಮಲೆ, ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನ, ಬ್ರಹ್ಮರ ಮೂಲಸ್ಥಾನ ಹಾಗೂ ಉಳ್ಳಾಕುಲು, ಪರಿವಾರ ದೈವಗಳ ದೈವಸ್ಥಾನಗಳು ಇತ್ತೀಚೆಗೆ ಅದ್ದೂರಿಯಾಗಿ ಬ್ರಹ್ಮಕಲಶೋತ್ಸವ ನಡೆದು ಮಾ. 7ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ವೈದಿಕ ಕಾರ್ಯಕ್ರಮಗಳೊಂದಿಗೆ ದೃಢಕಲಶೋತ್ಸವ ಕಾರ್ಯಕ್ರಮ ನಡೆಯಿತು.
ಹಾಗೂ ಮಾ.27 ರಂದು ವಾರ್ಷಿಕ ಮಹಾಪೂಜೆ ಸಾಮೂಹಿಕ ನಾಗ ತಂಬಿಲ ಸೇವೆ ನಡೆಯಲಿರುವುದು ಇದೇ ಸಂದರ್ಭದಲ್ಲಿ ತಂತ್ರಿಗಳವರು ಆಮಂತ್ರಣ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಗೌರವ ಅಧ್ಯಕ್ಷ ಚಿತ್ತರಂಜನ್ ಕಂಕನಾಡಿ ಮತ್ತು ಅವರ ಕುಟುಂಬಸ್ಥರು ಆಡಳಿತ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಟ್ರಸ್ಟ್ ಅಧ್ಯಕ್ಷರು ವಿವಿಧ ಸಮಿತಿ ಪದಾಧಿಕಾರಿಗಳು ಭಕ್ತಾದಿಗಳು ಉಪಸ್ಥಿತರಿದ್ದರು.