ಸರತಿ ಸಾಲಿನಲ್ಲಿ ಬಂದು ಅಂತಿಮ ನಮನ ಸಲ್ಲಿಸುತ್ತಿರುವ ಸಾರ್ವಜನಿಕರು
ಇಂದು ಮುಂಜಾನೆ ನಿಧನರಾದ ಕಾಂಗ್ರೆಸ್ ಹಿರಿಯ ನಾಯಕ, ಸಾಮಾಜಿಕ ಧುರೀಣ ಹಾಜಿ ಬೀರಾಮೊಯ್ದಿನ್ ಅವರ ಪಾರ್ಥಿವ ಶರೀರವನ್ನು ಇದೀಗ ಕನಕಮಜಲಿನ ಮೃತರ ಮನೆಗೆ ತರಲಾಗಿದ್ದು, ಅಂತಿಮ ವಿಧಿವಿಧಾನಗಳು ನೆರವೇರುತ್ತಿವೆ.
ಮೃತರ ನಿಧನದ ಸುದ್ದಿ ತಿಳಿದು ಸುಳ್ಯ ತಾಲೂಕಿನಾದ್ಯಂತದಿಂದ, ಪುತ್ತೂರು ಸೇರಿದಂತೆ ಅನೇಕ ಕಡೆಗಳಿಂದ ಮೃತರ ಕುಟುಂಬಸ್ಥರು, ಬಂಧುಗಳು, ಸಾರ್ವಜನಿಕರು ಸಾಗರೋಪಾಧಿಯಲ್ಲಿ ಬಂದು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ.