ಅಮರಮುಡ್ನೂರು ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯು ಮಾ.8 ರಂದು ಪಂ.ಅಧ್ಯಕ್ಷೆ ಪದ್ಮ ಪ್ರಿಯಾ ಮೇಲ್ತೋಟ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮದ ಕೆಲವು ವಾರ್ಡುಗಳಲ್ಲಿ ಶಾಲೆಗೆ ಹೋಗದೆ ಉಳಿದಿರುವ ಮಕ್ಕಳನ್ನು ಶಾಲೆಗೆ ಹೋಗುವಂತೆ ಮಾಡುವ ಕಾರ್ಯಕ್ಕೆ ಸದಸ್ಯರು ಮುತುವರ್ಜಿ ವಹಿಸುವಂತೆ ಸೂಚಿಸಲಾಯಿತು. ಪಂಚಾಯತ್ ಗ್ರಂಥಾಲಯಕ್ಕೆ ಭರ್ತಿಯಾಗಬೇಕಾದ ಹುದ್ದೆಗೆ ಅರ್ಜಿ ಸ್ವೀಕರಿಸಿ ಜಿಲ್ಲಾ ಗ್ರಂಥಾಲಯಕ್ಕೆ ಕಳುಹಿಸಿ ಆಯ್ಕೆ ಪ್ರಕ್ರಿಯೆ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯನ್ನು ರಚಿಸಲಾಯಿತು. ಮುಂದಿನ ಕ್ರಿಯಾಯೋಜನೆಯಲ್ಲಿ ಕೆಲವೊಂದು ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಸೇರಿಸಿಕೊಳ್ಳುವಂತೆ ಪ್ರಸ್ತಾಪಿಸಲಾಯಿತು. ಕೆಲವೊಂದು ದೂರು ಅರ್ಜಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಬಗ್ಗೆ ಪಿ.ಡಿ.ಒ ರವರು ಸ್ಥಳಕ್ಕೆ ತೆರಳಿ ಪರಿಶೀಲಿಸುವಂತೆ ಸೂಚಿಸಿದರು.ವೇದಿಕೆಯಲ್ಲಿ ಉಪಾಧ್ಯಕ್ಷೆ ಶಶಿಕಲಾ ಕೇನಡ್ಕ, ಪಿಡಿಒ ಆಕಾಶ್,ಕಾರ್ಯದರ್ಶಿ ದಯಾನಂದ ಪತ್ತುಕುಂಜ ಪಂ.ಸದಸ್ಯರಾದ ಜಯಪ್ರಕಾಶ ದೊಡ್ಡಿಹಿತ್ಲು, ಅಶೋಕ್ ಚೂಂತಾರು, ಕೃಷ್ಣ ಪ್ರಸಾದ್ ಮಾಡಬಾಕಿಲು, ದಿವ್ಯ ಮಡಪ್ಪಾಡಿ, ದಿವಾಕರ ಪೈಲಾರು, ವೆಂಕಟ್ರಮಣ ಇಟ್ಟಿಗುಂಡಿ, ಯಮುನಾ ಬೊಳ್ಕೋಡಿ,ಜಾನಕಿ, ಹೂವಪ್ಪ ಗೌಡ ಆರ್ನೋಜಿ, ಜನಾರ್ಧನ ಪೈಲೂರು, ಭುವನೇಶ್ವರೀ, ರಾಧಾಕೃಷ್ಣ ಕೊರತ್ಯಡ್ಕ, ಮೀನಾಕ್ಷಿ ಚೂಂತಾರು, ಸೀತಾ ಹೆಚ್, ತೇಜಾವತಿ ಕುಂಟಿಕಾನ ಉಪಸ್ಥಿತರಿದ್ದರು.ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.