ಸುಬ್ರಹ್ಮಣ್ಯ ಗ್ರಾ.ಪಂ ನ ಮಾಜಿ ಸದಸ್ಯ , ಏನೆಕಲ್ಲು ಗ್ರಾಮದ ಚಿಕ್ಕನಮಜಲು ಕುಶಾಲಪ್ಪ ಪೂಜಾರಿ ಕಲ್ಕುದಿ ಇಂದು ಬೆಳಗ್ಗೆ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
ಇಂದು ಬೆಳಗ್ಗೆ ರಾಮಪತ್ರೆ ಕೊಯ್ಯಲೆಂದು ಹೊರ ಹೋದವರ ಮೃತದೇಹವು ಹೊಳೆ ಬದಿ ನೀರಿನಲ್ಲಿ ಬಿದ್ದಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ.
ಅವರಿಗೆ 48 ವರ್ಷ ವಯಸ್ಸಾಗಿತ್ತು. ಮೃತದೇಹವನ್ನು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ. ಮೃತರು ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ಯಾಗಿರುವ ಪತ್ನಿ ಶಶಿಕಲಾ ಕಲ್ಕುದಿ, ಮಕ್ಕಳಾದ ಕೌಶಿಕ್, ಸುಮಂತ್ ಹಾಗೂ ಬಂಧುಗಳನ್ನು ಅಗಲಿದ್ದಾರೆ.