ಕೊಲ್ಲಮೊಗ್ರು – ಬೆಂಡೋಡಿ – ಕಾಂತುಕುಮೇರಿ ರಸ್ತೆಯ ಸಂಪ್ಯಾಡಿ ಎಂಬಲ್ಲಿ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ವಿದ್ಯುತ್ ಕಂಬಕ್ಕೆ ಬೀಳುವ ಸ್ಥಿತಿಯಲ್ಲಿದ್ದು, ಸಾರ್ವಜನಿಕರಿಗೆ ಅಪಾಯವಿದೆ.
ಸಂಪ್ಯಾಡಿ ಎಂಬಲ್ಲಿ ಇತ್ತೀಚಿಗೆ ರಸ್ತೆ ಅಭಿವೃದ್ಧಿಗಾಗಿ ಏರು ತಗ್ಗಿಸಲಾಗಿತ್ತು. ಆದರೆ ರಸ್ತೆ ಬದಿಯ ವಿದ್ಯುತ್ ಕಂಬದ ಸುತ್ತ ಮಣ್ಣು ತೆಗೆದು ಕಂಬಕ್ಕೆ ಅಪಾಯ ತಂದೊಡ್ಡಿದ್ದಾರೆ. ಮುಂದಿನ ಮಳೆಗಾಲ ಈ ಕಂಬ ಬಿದ್ದು ಅಪಾಯ ಸಂಭವಿಸುವ ಮೊದಲೇ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.
ಬೇಜಾವಬ್ದಾರಿಯಿಂದ ಕಂಬದ ಸುತ್ತಲೂ ಅಪಾಯ ಒಡ್ಡುವಂತೆ ಮಣ್ಣು ತೆಗೆದಿರುವ ಕಂಟ್ರಾಕ್ಟರ್ ರನ್ನು ದೂರಬೇಕೆ ಅಥವಾ ಜೆಸಿಬಿ ಯವರನ್ನು ದೂರಬೇಕೆ ಎಂದು ತಿಳಿಯದಾಗಿದೆ. ಆದರೆ ಮೆಸ್ಕಾಂ ಗೆ ತಲೆ ನೋವು ಉಂಟು ಮಾಡುವಂತೆ ಮಾಡಿರುವ ಕಾಮಗಾರಿಗೆ ಏನು ಎನ್ನಬೇಕೆಂದು ತಿಳಿಯದಾಗಿದೆ. ಮೊದಲೇ ಮಾಹಿತಿ ನೀಡಿ ತೆಗೆದರೆ ಅಪಾಯವನ್ನು ತಡೆಯಬಹುದಾಗಿದೆ. ಇನ್ನಾದರು ಎಚ್ಚೆತ್ತು ಕಂಬವನ್ನು ಶಿಪ್ಟ್ ಮಾಡಬೇಕಾಗಿದೆ.