ಸುಬ್ರಹ್ಮಣ್ಯ ಕ್ಷೇತ್ರದ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆಯವರು ತಮ್ಮ ತಾ.ಪಂ. ಅನುದಾನ ರೂ. 1.00ಲಕ್ಷ ವೆಚ್ಚದಲ್ಲಿ ಯೇನೆಕಲ್ಲು ಬಳಿಯ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ದ್ವಾರದ ಬಳಿ ನಿರ್ಮಿಸಿದ ವಿದ್ಯುತ್ ಹೈಮಾಸ್ಟ್ ದೀಪವನ್ನು ಮಾ. 13ರಂದು ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ ಉದ್ಘಾಟಿಸಿದರು. ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಮಾಗಣೆ ಗೌಡರಾದ ಉದಯಕುಮಾರ್ ಬಾನಡ್ಕ, ರಾಧಾಕೃಷ್ಣ ಪೂಜಾರಿಮನೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗೇಶ್ ನೆಕ್ರಾಜೆ, ವೆಂಕಟೇಶ್ ಕಾರಂತ, ಕಾರ್ಯಪ್ಪ ಗೌಡ ಪಿ.ಎಸ್, ಮೋಹಿತ್ ಜೇನುಕೊಡಿ, ದಿನೇಶ್, ಜಗದೀಶ್ ಸಂಕಡ್ಕ, ಲಕ್ಷ್ಮೀನಾರಾಯಣ ಉಡುದೋಳಿ, ಮಹೇಶ್, ರವಿ, ಕಿರಣ್, ಕುಸುಮಾಧರ, ಗಿರೀಶ್ ಪದ್ನಡ್ಕ, ಮೋಹನ್ ಕಮಾರ್ ಕೆ, ಸುಬ್ರಹ್ಮಣ್ಯ ಗ್ರಾ.ಪಂ. ಕಾರ್ಯದರ್ಶಿ ಡಿ. ಮೋನಪ್ಪ, ಶ್ರೀಮತಿ ಕವಿತಾ ಶಿವರಾಮ, ಪುಟ್ಟಣ್ಣ, ದೇವದಾಸ, ವೆಂಕಪ್ಪ ಬಿ, ಸುಬ್ಬಪ್ಪ ಪೂಜಾರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.