ಸುಳ್ಯದಲ್ಲಿ ಮತ್ತೆ ಜೆಡಿಎಸ್ ಬಲಿಷ್ಠಗೊಳಿಸಲು ಸಂಕಲ್ಪ : ಜಾಕೆ ವಿಶ್ವಾಸ
ಈ ಹಿಂದಿನಂತೆ ಮತ್ತೆ ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವ ನಿಟ್ಟಿನಲ್ಲಿ ಸಂಘಟನೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರು ಕೂಡಾ ಪಕ್ಷ ಸಂಘಟನೆ ಗೆ ಚಿಂತನೆ ನಡೆಸಬೇಕು ಎಂದು ಜೆಡಿಎಸ್ ದ.ಕ. ಮತ್ತು ಉಡಪಿ ಜಿಲ್ಲಾ ಉಸ್ತುವಾರಿ ಜಾಕೆ ಮಾಧವ ಗೌಡರು ಹೇಳಿದ್ದಾರೆ.
ಇಂದು ಸುಳ್ಯದಲ್ಲಿ ಜೆ.ಡಿಎಸ್ ಗೆ ನೂತನ ಅಧ್ಯಕ್ಷರ ಆಯ್ಕೆಗಾಗಿ ಕರೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಪಕ್ಷಕಟ್ಟುವ ಉದ್ದೇಶದಿಂದ ಸಮಿತಿಯನ್ನು ರಚಿಸಲಾಗುವುದು. ಅಧ್ಯಕ್ಷ ರ ಆಯ್ಕೆಯ ಬಳಿಕ ಎಲ್ಲರೂ ಅಧ್ಯಕ್ಷ ರಿಗೆ ಬೆಂಬಲ ನೀಡಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು. ಗ್ರಾಮ ಗ್ರಾಮಗಳಲ್ಲಿ ಸಮಿತಿ ರಚನೆ ಮಾಡಿ ಆ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಇದೆ ಎಂದು ಹೇಳಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ದಯಾಕರ ಆಳ್ವ ಮಾತನಾಡಿ, ನಾನು 10 ವರ್ಷ ದಿಂದ ಅಧ್ಯಕ್ಷ ನಾಗಿದ್ದೇನೆ. ಎಲ್ಲರ ಸಹಕಾರದಿಂದ ಪಕ್ಷವನ್ನು ಸಾಧ್ಯವಾದಷ್ಟು ಬೆಳೆಸಿದ್ದೇವೆ ಎಂದು ಹೇಳಿದರು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಇಕ್ಬಾಲ್ ಎಲಿಮಲೆ ಮಾತನಾಡಿ, ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡೋಣ. ಮುಂಬರುವ ಚುನಾವಣೆಗೂ ನಮ್ಮ ಅಭ್ಯರ್ಥಿಗಳು ಸ್ಪರ್ಧೆಯಲ್ಲಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಸ್ವಾಗತಿಸಿದರು.
ಪ್ರಮುಖರಾದ ಸುಕುಮಾರ ಕೋಡ್ತುಗುಳಿ, ಮಹಾಲಕ್ಷ್ಮಿ ಕೊರಂಬಡ್ಕ, ಹನೀಫ್ ಮೊಟ್ಟೆಂಗಾರ್, ಚೋಮ ಗಾಂಧಿನಗರ, ರಾಮಚಂದ್ರ ಬಳ್ಳಡ್ಕ, ಹನೀಫ್ ಜೀರ್ಮುಕಿ, ಸುರೇಶ್ ನಡ್ಕ, ಹಸೈನಾರ್ ಕಲ್ಲುಗುಂಡಿ, ಹನೀಫ್ ಮೆತ್ತಡ್ಕ, ಗಣೇಶ್ ಭೀಮಗುಳಿ, ಎಂ.ಎ. ಉಮ್ಮರ್ ಮೊದಲಾದವರಿದ್ದರು.