ಮಾ. 18,19 : ಶ್ರೀ ಎಡಮಲೆ ಇರ್ವೆರ್ ಉಳ್ಳಾಕುಲು ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಐವರ್ನಾಡು ಗ್ರಾಮದ ಶ್ರೀ ಎಡಮಲೆ ಇರ್ವೆರ್ ಉಳ್ಳಾಕುಲು ಮತ್ತು ಪರಿವಾರ ದೈವಗಳು ಪೇರಡ್ಕ – ಮಾಡ ವಾರ್ಷಿಕ ನೇಮೋತ್ಸವವು ಮಾ.18 ಮತ್ತು ಮಾ.19 ರಂದು ನಡೆಯಲಿದೆ.
ಮಾ.12 ರಂದು ಮುಹೂರ್ತದ ಗೊನೆ ಕಡಿಯಲಾಯಿತು.
ಮಾ.18 ರಂದು ಬೆಳಿಗ್ಗೆ ಗಂಟೆ 10.00 ಕ್ಕೆ ಸ್ಥಳ ಶುದ್ಧಿ, ಆಯುಧ ಶುದ್ಧಿ, ತಂಬಿಲ ಸೇವೆ ನಡೆಯಲಿದೆ.
ಸಂಜೆ ಗಂಟೆ 7.00 ಕ್ಕೆ ನೂಜಾಲು ಮಾಳ್ಯದಿಂದ ಭಂಡಾರ ತೆಗೆಯುವುದು.
ರಾತ್ರಿ ಗಂಟೆ 11.30 ಕ್ಕೆ ಮುಡಿಯಾಗಿ ಪಲಯ ನೇಮ ನಡಾವಳಿ ನಡೆಯಲಿದೆ.
ಮಾ.19 ರಂದು ಬೆಳಿಗ್ಗೆ ಗಂಟೆ 8.00 ಕ್ಕೆ ಮೆಗ್ಯ ನೇಮ ನಡಾವಳಿ ಪ್ರಾರಂಭ, ಗಂಟೆ 8.30 ಕ್ಕೆ ಪ್ರಸಾದ ವಿತರಣೆ, ಬಟ್ಟಲು ಕಾಣಿಕೆ ಗಂಟೆ 11.30 ಕ್ಕೆ ನಾಯರ್ ದೈವದ ನೇಮ ನಡೆಯಲಿದೆ.
ಮಧ್ಯಾಹ್ನ ಗಂಟೆ 12.30 ಕ್ಕೆ ಪುರುಷ ದೈವದ ಮತ್ತು ಉಪದೈವಗಳ ಕೋಲ ನಡೆಯಲಿದೆ.
ಗಂಟೆ 1.30 ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 5.00 ಕ್ಕೆ ದೈವದ ಭಂಡಾರವನ್ನು ಅಂಗಡಿಮಜಲು ಮಾಳ್ಯಕ್ಕೆ ಸಾಗಿಸುವುದು.

ಧಾರ್ಮಿಕ ಉಪನ್ಯಾಸ ಮತ್ತು ಸನ್ಮಾನ
ಮಾ.18 ರಂದು ಸಂಜೆ ಗಂಟೆ 7.00 ರಿಂದ ನಡೆಯುವ ಸಭಾಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ನಾರಾಯಣ ಗೌಡ ಕೊಳ್ತಿಗೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಹಿರಿಯ ಯಕ್ಷಗಾನ ಕಲಾವಿದ ನಾರಾಯಣ ಗೌಡ ಕೊಳ್ತಿಗೆ, ನಿವೃತ್ತ ಯೋಧರಾದ ಮೋಹನದಾಸ್ ಕುಳ್ಳಂಪಾಡಿ, ಶ್ರೀಧರ ಸಾರಕರೆ, ರೋಹಿತ್ ಕುಳ್ಳಂಪಾಡಿ ಯವರನ್ನು ಸನ್ಮಾನಿಸಲಾಗುವುದು.
ನಂತರ ಸನತ್ ಬರೆಮೇಲು ಸಂಯೋಜನೆಯ ಯುನೈಟೆಡ್ ಸುಳ್ಯ ಇವರಿಂದ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.