ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ ಸಿಬ್ಬಂದಿ ವರ್ಗದವರ ಆಶ್ರಯದಲ್ಲಿ ಮುಕ್ತ ಕಿರಿಯ ಬಾಲಕ ಮತ್ತು ಬಾಲಕಿಯರ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟ ‘ಉತ್ಕರ್ಷ ಸಹಕಾರ ಟ್ರೋಫಿ 2021’ ಮಾ. 21.ರಂದು ಮಧ್ಯಾಹ್ನ ಗಂ.2.30 ರಿಂದ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉತ್ಕರ್ಷ ಸಹಕಾರ ಸೌಧ ವಠಾರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಗಿರಿಜಾ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಬ್ರಮಣ್ಯ ಕುಳ ವಹಿಸಲಿದ್ದಾರೆ. ಅತಿಥಿಯಾಗಿ ಸಹಕಾರ ಸಂಘಗಳ ಮೇಲ್ವಿಚಾರಕ ಪ್ರದೀಪ್ ಕುಮಾರ್ ವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ್ ಪಲ್ಲೋಡಿ ಅಧ್ಯಕ್ಷತೆ ವಹಿಸಲ್ಲಿದ್ದಾರೆ.ಸಂಘದ ಉಪಾಧ್ಯಕ್ಷ ಲಿಗೋಧರ ಆಚಾರ್ಯ ನಾಯರ್ ಕೆರೆ , ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ಸೋಮಶೇಖರ ನೇರಳ ಉಪಸ್ಥಿತರಿರುವರು.ಬಾಲಕರ ವಿಭಾಗಕ್ಕೆ ಪ್ರಥಮ ರೂ. 1111, ದ್ವಿತೀಯ ರೂ. 777, ತೃತೀಯ ರೂ 333, ಚತುರ್ಥ 222 ಮತ್ತು ಶಾಶ್ವತ ಫಲಕ, ಬಾಲಕಿಯರ ವಿಭಾಗಕ್ಕೆ ಪ್ರಥಮ ರೂ.1111 ದ್ವಿತೀಯ ರೂ. 777, ತೃತೀಯ ರೂ. 333 ಚತುರ್ಥ ರೂ. 222 ಶಾಶ್ವತ ಫಲಕ ಇರುತ್ತದೆ. 10 ನೇ ತರಗತಿ ಒಳಗಿನವರನ್ನು ಕಿರಿಯ ತಂಡ ಎಂದು ಪರಿಗಣಿಸಲಾಗುತ್ತದೆ.
ತಾವು ಕಲಿಯುವ ವಿದ್ಯಾ ಸಂಸ್ಥೆಗಳಿಂದ ಪ್ರಮಾಣ ಪತ್ರ ಕಡ್ಡಾಯವಾಗಿ ತರಬೇಕು ಎಂದು ಸಂಘಟಕರು ತಿಳಿಸಿದ್ದಾರೆ.