ಶ್ರೀ ವಿಶ್ವಕರ್ಮ ಭಜನಾ ಮಂಡಳಿ ನಿಡ್ಮಾರು, ಕೊಡಿಯಾಲ ಇದರ 19ನೇ ವರ್ಷದ ವಾರ್ಷಿಕೋತ್ಸವ, ವಿಶ್ವಕರ್ಮ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಮಾ. 14ರಂದು ಕೊಡಿಯಾಲ ಗ್ರಾಮದ ನಿಡ್ಮಾರು ಮಂಡಳಿಯ ನಿವೇಶನದಲ್ಲಿ ನಡೆಯಿತು. ಪೂರ್ವಾಹ್ನ ವಿಶ್ವಕರ್ಮ ಪೂಜೆ ಆರಂಭಗೊಂಡಿತು. ಬಳಿಕ ಭಜನಾ ಮಂಡಳಿಯ ಅಧ್ಯಕ್ಷ ಕೆ.ಎಚ್. ಮಧುಚಂದ್ರ ಪಂಜರವರ ಅಧ್ಯಕ್ಷತೆಯಲ್ಲಿ ನಡೆದ ದಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಂಗಳೂರಿನ ಸಿತಾರಾಮ ಗೋ ಸೇವಾಶ್ರಮದ ಅಧ್ಯಕ್ಷ ಯೋಗಾಚಾರ್ಯ ಶ್ರೀ ಪುಂಡರೀಕಾಕ್ಷ ಬೆಳ್ಳೂರುರವರು ಧಾರ್ಮಿಕ ಉಪನ್ಯಾಸ ನೀಡಿದರು. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು, ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ಸಂಚಾಲಕರಾದ ಎಂ.ಪಿ. ಉಮೇಶ್, ಸುಳ್ಯ ಸುದ್ದಿ ಬಿಡುಗಡೆ ವಾರಪತ್ರಿಕೆಯ ವರದಿಗಾರ ಈಶ್ವರ ವಾರಣಾಶಿ ಅತಿಥಿಗಳಾಗಿ ಭಾಗವಹಿಸಿದ್ದರು. ಯಕ್ಷಗುರು ಹಾಗೂ ಕಲಾವಿದ ಲಕ್ಷ್ಮಣ ಆಚಾರ್ಯ ಎಡಮಂಗಲರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೀಮತಿ ಅರುಣಾ ಶೇಷಪ್ಪ ಆಚಾರ್ಯ ನಿಡ್ಮಾರು ಸನ್ಮಾನ ಪತ್ರ ವಾಚಿಸಿದರು. ಮಂಡಳಿಯ ಕೋಶಾಧಿಕಾರಿ ಶೇಷಪ್ಪ ಆಚಾರ್ಯ ನಿಡ್ಮಾರು ಪ್ರಾರ್ಥಿಸಿದರು. ಅಧ್ಯಕ್ಷ ಕೆ.ಎಚ್. ಮಧುಚಂದ್ರ ಪಂಜ ಸ್ವಾಗತಿಸಿ ವಂದಿಸಿದರು.
ಪ್ರಧಾನ ಕಾರ್ಯದರ್ಶಿ ನಾರಾಯಣ ಎಂ.ಆರ್. ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರಗಲಿದೆ. ಸಂಜೆ 6.00 ಗಂಟೆಯಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 12.00 ಗಂಟೆಗೆ ಭಜನಾ ಮಂಗಳೋತ್ಸವ ನಡೆಯಲಿದೆ.