ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಏ.13 ರಿಂದ ಏ.20 ರವರೆಗೆ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಪೂರ್ವಭಾವಿ ಸಭೆಯು ಮಾ.14 ರಂದು ನಡೆಯಿತು.
ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜೀರ್ಣೋದ್ಧಾರ ಅಧ್ಯಕ್ಷ ಪಿ.ಬಿ.ದಿವಾಕರ ರೈ ಯವರು ಮಾತನಾಡಿ ಈಗ ದೇವಸ್ಥಾನದ ಆರ್ಥಿಕ ವ್ಯವಸ್ಥೆಯು ಕುಂಠಿತವಾಗಿದ್ದು, ದೇವಾಲಯದ ಖರ್ಚಿಗೆ ಮತ್ತು ಜಾತ್ರೋತ್ಸವಕ್ಕೆ ಆರ್ಥಿಕ ಕ್ರೋಢಿಕರಣದ ಅಗತ್ಯವಿದ್ದು, ಇದಕ್ಕೆ ನಾವು ಗ್ರಾಮವಾರು ಸಮಿತಿಯನ್ನು ರಚಿಸಿ, ಆರ್ಥಿಕ ಕ್ರೋಢಿಕರಣ ಮಾಡಬೇಕಾಗಿದೆ. ಈ ಸಲದ ಜಾತ್ರೋತ್ಸವಕ್ಕೆ ಕಾರ್ಯಕ್ರಮವನ್ನು ಬಹಳ ಸರಳವಾಗಿ ನಡೆಸುವಂತೆ ತೀರ್ಮಾನಿಸಲಾಯಿತು. ಇದಕ್ಕೆ ಜೀರ್ಣೋದ್ಧಾರ ಸಮಿತಿಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳು, ಊರ ಭಕ್ತಾಭಿಮಾನಿಗಳು ಸಂಪೂರ್ಣ ಸಹಕಾರ ನೀಡಬೇಕೆಂದು ಸಭೆಯಲ್ಲಿ ತಿಳಿಸಿದರು. ಮುಂದೆ ಬೈಲುವಾರು ಸಮಿತಿಯನ್ನು ರಚಿಸಿ, ಆರ್ಥಿಕ ಕ್ರೋಢಿಕರಣಕ್ಕೆ ಪ್ರಾರಂಭಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಮುಂದೆ ಜಾತ್ರೋತ್ಸವಕ್ಕೆ ಭಕ್ತಾಭಿಮಾನಿಗಳಿಂದ ಜಾತ್ರಾ ಕಾರ್ಯಕ್ರಮದ ಪ್ರಾಯೋಜಕರನ್ನು ಕೇಳುವುದೆಂದು, ಹಸಿರುವಾಣಿ ಸಂಗ್ರಹಿಸುವಾಗ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಅಕ್ಕಿಯನ್ನು ನೀಡಿ ಸಹಕರಿಸಬೇಕೆಂದು ವಿನಂತಿಸಿದರು.
ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಉಳುವಾರು, ಮಾಜಿ ವ್ಯ.ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಮ್ಯಾನೇಜರ್ ಆನಂದ ಕಲ್ಲಗದ್ದೆ, ಪವಿತ್ರಪಾಣಿ ಕುಮಾರ ಬೈಪಡಿತ್ತಾಯ ಉಪಸ್ಥಿತರಿದ್ದು, ಸಭೆಯಿಂದ ಗಣಪತಿ ಭಟ್ ಗೂನಡ್ಕ, ಕೆ.ಕೆ.ನಾರಾಯಣ, ಜನಾರ್ಧನ ಬಾಳಕಜೆ, ಉಮಾಶಂಕರ ಅಡ್ಯಡ್ಕ, ಎಸ್.ಪಿ.ಲೋಕನಾಥ, ಕಾರ್ಯಕ್ರಮದ ಬಗ್ಗೆ ಸಲಹೆ ಸೂಚನೆ ನೀಡಿದರು.