ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ ಎಸ್ ಯು ಐ) ವತಿಯಿಂದ ವಿದ್ಯಾರ್ಥಿಗಳ ಪರವಾಗಿ ಕ್ಯಾಂಪಸ್ ಗೇಟ್ ಮೀಟ್ ಅಭಿಯಾನವನ್ನು ಹಮ್ಮಿಕೊಂಡು ಈಗಾಗಲೇ ಯಶಸ್ವಿಯಾಗಿ ನಡೆಸಲಾಗಿದೆ.
ಇದರಲ್ಲಿ ಸ್ಕಾಲರ್ ಶಿಪ್, ಬಿಸಿಎಂ ಹಾಸ್ಟೆಲ್, ಇಂದಿರಾ ಕ್ಯಾಂಟೀನ್ ಮುಂತಾದ ಸಮಸ್ಯೆಗಳನ್ನು ಇತ್ಯಾರ್ಥಗೊಳಿಸುವ ಪ್ರಯತ್ನ ಮಾಡಿದ್ದೇವೆ. ಅಲ್ಲದೇ ಇನ್ನು ಮುಂದೆಯೂ ವಿದ್ಯಾರ್ಥಿಗಳು ತಮ್ಮ ಯಾವುದೇ ಸಮಸ್ಯೆಗಳನ್ನು ಎನ್.ಎಸ್.ಯು.ಐ.ಗೆ ತಿಳಿಸಿದರೆ ನಾವು ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುತ್ತೇವೆ ಎಂದು ಎನ್ ಎಸ್ ಯು ಐ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಕೀರ್ತನ್ ಕೊಡಪಾಲ ತಿಳಿಸಿದ್ದಾರೆ.