ಯುವ ವಾಹಿನಿ ಕಡಬ ಘಟಕದ ಆಶ್ರಯದಲ್ಲಿ ಮಾ. 14ರಂದು ನಡೆದ ವಿಶ್ವ ಮಹಿಳಾ ದಿನಾಚರಣೆಯನ್ನು ಸುಬ್ರಹ್ಮಣ್ಯದ ಶ್ರೀಮತಿ ಗೀತಾ ರವಿ ಕಕ್ಕೆಪದವು ಉದ್ಘಾಟಿಸಿದರು.
ಯುವ ವಾಹಿನಿ ಕಡಬ ಘಟಕದ ಅಧ್ಯಕ್ಷ ಶಿವಪ್ರಸಾದ್ ನೂಚಿಲರವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಂಘದ ಅಧ್ಯಕ್ಷೆ ಶ್ರೀಮತಿ ಉಷಾ ಅಂಚನ್ ಅತಿಥಿಯಾಗಿ ಭಾಗವಹಿಸಿದ್ದರು.
ಯವ ವಾಹಿನಿ ಮಂಗಳೂರು ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಜನಾರ್ದನ್, ಕಡಬ ಶಾಖಾ ಮಹಿಳಾ ನಿರ್ದೇಶಕಿ ಶ್ರೀಮತಿ ಸರಿತಾ ಉಂಡಿಲ, ಭಜನಾ ಸಂಚಾಲಕಿ ಶ್ರೀಮತಿ ಪ್ರೇಮಾ ವಿದ್ಯಾನಗರ, ಕಡಬ ಬಿಲ್ಲವ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಹರಿಣಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನಾಟಿ ವೈದ್ಯೆ ಶ್ರೀಮತಿ ಚೆನ್ನಮ್ಮ ಪೂಜಾರಿ ಮಾದರಿಕೆಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.