Breaking News

ವಿಜೃಂಭಣೆಯಿಂದ ನಡೆದ ಕಂದ್ರಪ್ಪಾಡಿ ಜಾತ್ರೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle

‘ಎನ್ನ ಬಂಙ ಎಂಕೇ ಗೊತ್ತು’ ತುಳು ನಾಟಕಕ್ಕೆ ಕಿಕ್ಕಿರಿದ ಜನಸಂದಣಿ

ದೇವಚಳ್ಳ ಗ್ರಾಮದ ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಮತ್ತು ಪುರುಷ ದೈವ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವವು ಮಾ.೧೦ ರಿಂದ ೧೫ರ ತನಕ ವಿಜೃಂಭಣೆಯಿಂದ ನಡೆಯಿತು. ಮಾ.೯ರಂದು ನಾಗ ತಂಬಿಲ, ಪ್ರತಿಷ್ಠಾ ದಿಣಾಚರಣೆ ಹಾಗೂ ಪೂಜಾ ಕಾರ್ಯಕ್ರಮ ನಡೆಯಿತು. ಮಾ.೧೦ರಂದು ಧ್ವಜಾರೋಹಣ ಮಾ.೧೪ರಂದು ಬೆಳಿಗ್ಗೆ ಮುಂಡೋಡಿ ತರವಾಡು ಮನೆಯಿಂದ ಮತ್ತು ರುದ್ರಚಾಮುಂಡಿ ದೈವಸ್ಥಾನದಿಂದ ದೈವಗಳ ಭಂಡಾರ ಬರುವುದು, ರಾತ್ರಿ ಉಗ್ರಾಣ ತುಂಬಿಸುವುದು, ಅನ್ನಸಂತರ್ಪಣೆ, ರಾತ್ರಿ ಗಂಟೆ ೯ಕ್ಕೆ ತಳೂರಿನಿಂದ ಶ್ರೀ ದೈವಗಳ ಭಂಡಾರ ಬರುವುದು, ಮಾಳಿಗೆಯಿಂದ ಪಲ್ಲಕ್ಕಿ ಉತ್ಸವದೊಂದಿಗೆ ದೈವಗಳಗಳ ಭಂಡಾರ ಬರುವುದು ನಡೆಯಿತು. ಮಾ.೧೫ರಂದು ಶ್ರೀ ರಾಜ್ಯದೈವದ ನೇಮ, ರುದ್ರಚಾಮುಂಡಿ, ಪುರುಷ ದೈವ, ಪಂಜುರ್ಲಿ ದೈವದ ನೇಮ ನಡೆಯಿತು. ಮಾ.೧೪ ರಂದು ರಾತ್ರಿ ಗಂಟೆ ೭.೦ರಿಂದ ಸ್ಥಳೀಯ ಅಂಗನವಾಡಿ ಮಕ್ಕಳಿಂದ ಮತ್ತು ಊರವರಿಂದ ಸಾಂಸ್ಕೃತಿಕ ವೈಭವ ನಡೆಯಿತು.ಬಳಿಕ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಅಭಿನಯದ, ಲಕುಮಿ ತಂಡದ ಕಲಾವಿದರು ಅಭಿನಯಿಸಿದ ಎನ್ನ ಬಂಗ ಎಂಕೇ ಗೊತ್ತು ತುಳು ಹಾಸ್ಯಮಯ ನಾಟಕ ನಡೆಯಿತು. ಸಾವಿರಕ್ಕಿಂತಲೂ ಹೆಚ್ಚು ಕಲಾಭಿಮಾನಿಗಳು ನಾಟಕವನ್ನು ವೀಕ್ಷಿಸಿದರು. ಸಭಾಂಗಣದಲ್ಲಿ ಆಸನಗಳು ಭರ್ತಿಗೊಂಡು ಸಭಾಂಗಣದ ಸುತ್ತಲೂ ಕಿಕ್ಕಿರಿದ ಜನಸಂದಣಿಯಿತ್ತು.
ಜಾತ್ರೋತ್ಸವದ ಪ್ರಯುಕ್ತ ಅಪರೂಪದ ಜಾನಪದ ಸ್ಪರ್ಧೆಗಳಲ್ಲಿ ಕಾಯಿ ಕುಟ್ಟುವ ಸ್ಪರ್ಧೆ ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಾಳಿಕಾಪ್ರಸಾದ್ ಮುಂಡೋಡಿ, ಸದಸ್ಯರುಗಳಾದ ವೇಣುಕುಮಾರ್ ಚಿತ್ತಡ್ಕ, ಪ್ರೀತಂ ಮುಂಡೋಡಿ, ಶಶಿಧರ ಜಾಕೆ, ಲೋಕಪ್ಪ ಗೌಡ ಶೀರಡ್ಕ, ಪದ್ಮನಾಭ ಮೀನಾಜೆ, ಯಶೋದಾ ರಾಮಚಂದ್ರ ಪಾರೆಪ್ಪಾಡಿ, ಮಹಾದೇವಿ ಕಿಶೋರ್ ಕುಮಾರ್ ಪೈಕ ಬೊಮ್ಮದೇರೆ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ದೈವಗಳ ಪ್ರಸಾದ ಸ್ವೀಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.