ಬೆಂಗಳೂರಿನ ಪತ್ರಕರ್ತರ ವೇದಿಕೆಯ ಉಡುಪಿ ಜಿಲ್ಲಾ ಘಟಕ ನೀಡುವ ದಿ. ರಾಜೇಶ್ ಶಿಬಾಜೆ ಪ್ರಶಸ್ತಿಯನ್ನು ಮಾ. 14 ರಂದು ಉಡುಪಿಯಲ್ಲಿ ಸ್ವೀಕರಿಸಿರುವ ಸುದ್ದಿ ಚಾನೆಲ್ ಹಾಗೂ ವೆಬ್ಸೈಟ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ಕೆರೆಯವರಿಗೆ ಇಂದು ಸುದ್ದಿ ಕಚೇರಿಯಲ್ಲಿ ಅಭಿನಂದನೆ ನಡೆಯಿತು.
ಸುದ್ದಿ ಸಮೂಹ ಸಂಸ್ಥೆಗಳ ಮಾಲಕ ಹಾಗೂ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ. ಯು.ಪಿ.ಶಿವಾನಂದರವರು ದುರ್ಗಾಕುಮಾರ್ರವನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸುದ್ದಿ ಪತ್ರಿಕೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್, ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ಹಾಗೂ ಸುದ್ದಿ ಸಿಬ್ಬಂದಿಗಳು ಉಪಸ್ಥಿತರಿದ್ದರು.