ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬಿ.ಎಸ್.ಎನ್.ಎಲ್. ಇದರ ಮಹಾ ಪ್ರಬಂಧಕರಾದ ಜಿ.ಆರ್. ರವಿ ಮಾ.15 ರಂದು ಭೇಟಿ ನೀಡಿದರು. ಸಂಘದ ವ್ಯಾಪ್ತಿಯಲ್ಲಿ ಅಂತರ್ಜಾಲ ಸೌಲಭ್ಯ ಕೊರತೆಯಿರುವ ಕಡೆಗಳಲ್ಲಿ ಸೆಲ್ಟೋನ್ ಜೊತೆಗೆ ಒಪ್ಪಂದ ಮಾಡಿಕೊಂಡು ಸಂಘದ ವತಿಯಿಂದ ಸದಸ್ಯರಿಗೆ ಅಂತರ್ಜಾಲ ಸೌಲಬ್ಯವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಿರುವ ಹಿನ್ನಲೆಯಲ್ಲಿ ಸೂಕ್ತವಾದ ಮಾರ್ಗದರ್ಶನವನ್ನು ನೀಡುವ ಸಲುವಾಗಿ ಸಂಘಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜಿ. ಆರ್. ರವಿ ಅವರನ್ನು ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ಸಂಘದ ವತಿಯಿಂದ ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಬಿ.ಎಸ್.ಎನ್.ಎಲ್. ಇದರ ಸಹಾಯಕ ಮಹಾಪ್ರಬಂಧಕರಾದ ಆನಂದ ನಾಯ್ಕ್, ಸಂಘದ ಉಪಾಧ್ಯಕ್ಷರಾದ ದಯಾನಂದ ಕುರುಂಜಿ, ನಿರ್ದೇಶಕರಾದ ಕುಸುಮಾಧರ ಅಡ್ಕಬಳೆ, ನಿಧೀಶ್ ಅರಂತೋಡು, ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್, ಸೆಲ್ ಟೋನ್ನ ವಿಷ್ಣುಪ್ರಸಾದ್ ಬಾಯಾರು ಉಪಸ್ಥಿತರಿದ್ದರು.