Breaking News

ಪಂಜ: ನಿವೃತ್ತ ನವೋದಯ ಪ್ರೇರಕರಿಗೆ ಸನ್ಮಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಪಂಜ ಸ್ಪಂದನ ನವೋದಯ ಸಂಘ ಇದರ ವತಿಯಿಂದ ನಿವೃತ್ತ ನವೋದಯ ಪ್ರೇರಕ ಯಶವಂತ ಎ.ಕೆ. ರವರಿಗೆ ಸನ್ಮಾನ ಸಮಾರಂಭ ಮಾ.15 ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜರುಗಿತು. ನವೋದಯ ಸಂಘದ ಅಧ್ಯಕ್ಷ ಸುಬ್ಬಪ್ಪ ಕಲ್ಗುಂಡಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ರವರು ಪ್ರೇರಕ ಯಶವಂತ ಎ. ಕೆ.ರವರನ್ನು ಸನ್ಮಾನಿಸಿ‌ ಮಾತನಾಡಿದರು.

 

ಇನ್ನೋರ್ವ ಅತಿಥಿಯಾಗಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ್ ಪಲ್ಲೋಡಿ , ಪ್ರೇರಕ ಹೇಮಂತ್ ಪೋಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇತ್ತೀಚೆಗೆ ಆಕಸ್ಮಿಕವಾಗಿ ನಿಧನರಾದ ಸ್ಪಂದನ
ನವೋದಯ ಸ್ವಸಹಾಯ ಸಂಘದ ಸದಸ್ಯ ಮಹಾಬಲ ಕುಳ ರವರಿಗೆ ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್‌ ನಿಂದ ನೀಡಲಾದ ವಿಮಾ ಮೊತ್ತ ರೂ.1.ಲಕ್ಷ ಚೆಕ್ ನ್ನು ಮೃತರ ಪತ್ನಿ ರುಕ್ಮಿಣಿ , ಪುತ್ರ ಕೌಶಿಕ್ ಕುಳ ರವರಿಗೆ ಹಸ್ತಾಂತರಿಸಿದರು ಕಾರ್ಯಕ್ರಮದಲ್ಲಿ ಪುರುಷೋತ್ತಮ ದಂಬೆಕೋಡಿ ವೇದಿಕೆ ಆಹ್ವಾನಿಸಿದರು.ಸುದರ್ಶನ ಪಟ್ಟಾಜೆ ಪ್ರಾರ್ಥಿಸಿದರು. ವಿಶ್ವನಾಥ ಸಂಪ ಸ್ವಾಗತಿಸಿದರು. ಗುರುಪ್ರಸಾದ್ ತೋಟ ಪ್ರಾಸ್ತಾವಿಕ ಗೈದರು. ಕೌಶಿಕ್ ಕುಳ ಸನ್ಮಾನಿತರ ಪರಿಚಯಿಸಿದರು.
ತೀರ್ಥಪ್ರಸಾದ ಪಲ್ಲತ್ತಡ್ಕ ನಿರೂಪಿಸಿದರು. ರಾಜೇಶ್ ಕಂಬಳ ವಂದಿಸಿದರು.
.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.