ಜಾಲ್ಸೂರು ಗ್ರಾಮದ ರುಕ್ಮಯ್ಯ ಗೌಡ ಕೆಮನಬಳ್ಳಿ (ಪಡ್ರೆ)ಯವರು ಮಾ.14ರಂದು ಹೃದಯಾಘಾತದಿಂದ ನಿಧನರಾದರು.
ಅವರಿಗೆ 66 ವರ್ಷ ವಯಸ್ಸಾಗಿತ್ತು. ಬ್ರಹ್ಮಾವರದಲ್ಲಿ ವಾಸ್ತವ್ಯವಿರುವ ಅವರು ಚಾಲಕ ವೃತ್ತಿಯನ್ನು ಮಾಡುತ್ತಿದ್ದರು. ಮಾ.14ರಂದು ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಎದೆನೋವು ಕಾಣಿಸಿಕೊಂಡು ಅಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಹೃದಯಾಘಾತದಿಂದ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಮೃತರು ಪತ್ನಿ ಸೀತ , ಪುತ್ರಿಯರಾದ ಯೋಗಿತ, ನಮಿತ, ಪುತ್ರ ಸುದರ್ಶನ, ಸಹೋದರರು ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಮಾ.15ರಂದು ಜಾಲ್ಸೂರಿನ ಕೆಮನಬಳ್ಳಿ ಮನೆಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.