Breaking News

ಹರಿಹರಪಲ್ಲತಡ್ಕ: ಮದ್ಯಮುಕ್ತ ಗ್ರಾಮ ಹೋರಾಟ ಸಮಿತಿ ರಚನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಹರಿಹರ ಪಲ್ಲತಡ್ಕ ಗ್ರಾ.ಪಂ ನ ಹರಿಹರ ಪಲ್ಲತಡ್ಕ ಪೇಟೆಯಲ್ಲಿ ಮದ್ಯ ಮಾರಾಟ ಕೇಂದ್ರ ಆರಂಭವಾಗುವುದಾಗಿ ಪ್ರಚಾರದಲ್ಲಿದ್ದು ಅದನ್ನು ವಿರೋಧಿಸಿ ಇಂದು ಹರಿಹರೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಸಭೆ ನಡೆಯಿತು .

ಸಭೆಯಲ್ಲಿ ಗ್ರಾಮ ವನ್ನು ಮದ್ಯ ಮುಕ್ತವಾಗಿರಿಸಲು ಒಕ್ಕೊರಲ ಆಗ್ರಹ ವ್ಯಕ್ತವಾಗಿದ್ದು ಮದ್ಯಮುಕ್ತ ಗ್ರಾಮ ಹೋರಾಟ ಸಮಿತಿ ರಚನೆ ರಚನೆಗೊಂಡಿತು. ಅಲ್ಲದೆ ಸಭೆಯಲ್ಲಿ ಹರಿಹರ ಗ್ರಾ.ಪಂ ನ ವಿಶೇಷ ಗ್ರಾಮ ಸಭೆಯನ್ನು ಕರೆದು 1994 ರ ನಿರ್ಣಯದಂತೆ ಜನರ ಅಭಿಪ್ರಾಯ ತೆಗೆದು ಮದ್ಯಮುಕ್ತ ಗ್ರಾಮ ನಿರ್ಣಯನ್ನು ಮತ್ತೆ ನಿರ್ಣಯಿಸಿ ಸರ್ಕಾರವನ್ನು ಒತ್ತಾಯಿಸುವುದಾಗಿ ಚರ್ಚಿಸಲಾಗಿದೆ. ಜಿಲ್ಲಾಧಿಕಾರಿ ಮತ್ತು ಅಬಕಾರಿ ಇಲಾಖೆಗೆ ಭೇಟಿ ನೀಡಿ ಮನವಿ ನೀಡುವುದಾಗಿ ನಿರ್ಣಯಸಲಾಗಿದೆ ಎಂದು ತಿಳಿದು ಬಂದಿದೆ.
ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ, ದುರ್ಗಾದಾಸ್ ಮಲ್ಲಾರ, ಮಾಧವ ಚಾಂತಾಳ, ಅನಂತ ಅಂಙಣ, ಸತೀಶ್ ಕೂಜುಗೋಡು, ವಿನೂಪ್ ಮಲ್ಲಾರ, ಹಿಮ್ಮತ್ ಕೆ.ಸಿ, ಬಿಂದು ಪಿ, ಜಯಂತ ಬಾಳುಗೋಡು, ವಿಜಯ ಅಂಙಣ, ಪ್ರದೀಪ್ ಕುಮಾರ್ ಕೆ.ಎಲ್, ಪುಷ್ಪರಾಜ್ ಪಡ್ಪು, ಯಶವಂತ ಬಾಳುಗೋಡು, ಧ.ಗ್ರಾ.ಯೋ ಮೇಲ್ವಿಚಾರಕ ಸೀತಾರಾಮ ಉಪಸ್ಥಿತರಿದ್ದರು.
ಬಾಲಸುಬ್ರಹ್ಮಣ್ಯ ಹರಿಹರ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸತೀಶ್ ಟಿ ಎನ್ ವಂದಿಸಿದರು. ಸಭೆಯಲ್ಲಿ ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು, ಐನೆಕಿದು, ಹರಿಹರ ಗ್ರಾಮದ ಅನೇಕರು ಭಾಗವಹಿಸಿದ್ದರು.

ಮದ್ಯಮುಕ್ತ ಗ್ರಾಮ ಸಮಿತಿಯ ಗೌರವಾದ್ಯಕ್ಷರಾಗಿ ದುರ್ಗದಾಸ್ ಮಲ್ಲಾರ, ಅದ್ಯಕ್ಷರಾಗಿ ಹಿಮ್ಮತ್ ಕೆ ಸಿ, ಕಾರ್ಯದರ್ಶಿಯಾಗಿ ಬಾಲಸುಬ್ರಹ್ಮಣ್ಯ, ಜತೆ ಕಾರ್ಯದರ್ಶಿ ಶ್ರೀಮತಿ ಬಿಂದು, ಕಾನೂನು ಸಲಹೆಗಾರರಾಗಿ ಪ್ರದೀಪ್ ಕುಮಾರ್ ಕೆ ಎಲ್, ಉಪದ್ಯಕ್ಷರುಗಳಾಗಿ ಸತೀಶ್ ಟಿ ಎನ್, ಚಂದ್ರಹಾಸ ಶಿವಾಲ, ಮಾದವ ಚಾಂತಳ, ಅನಂತ ಅಂಙಣ, ಜಯರಾಮ ಕರಂಗಲ್ಲು, ನಿತ್ಯಾನಂದ ಬೀಮಗುಳಿ, ಜಯಂತ ಬಾಳುಗೋಡು ಇರಲಿದ್ದಾರೆ. ಗೌರವ ಸಲಹೆಗಾರರಾಗಿ ಪಂಚಾಯತ್ ಸದಸ್ಯರುಗಳು ಹಾಗು ಧ.ಗ್ರಾ.ಯೋ. ಒಕ್ಕೂಟದ ಎಲ್ಲಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇರಲಿದ್ದಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.