ಮಾರ್ಚ್ 20, 21 ರಂದು ಪುರುಷರ ಸೀನಿಯರ್ ನ್ಯಾಷನಲ್ ಕಬಡ್ಡಿಗೆ ಬೆಂಗಳೂರಿನ ಕೆ ಆರ್ ಪುರದ ಹೂಡಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯು ಮಾರ್ಚ್ 19 ರಂದು ಸಂಜೆ 3.30ಕ್ಕೆ ಮಂಗಳಾ ಸ್ಟೇಡಿಯಂನಲ್ಲಿ ಆಯ್ಕೆ ಶಿಬಿರ ನಡೆಸಲಿದೆ. ಭಾಗವಹಿಸುವ ಕಬಡ್ಡಿ ಕ್ರೀಡಾಪಟುಗಳು ಶೂ ಮತ್ತು ಸಮವಸ್ತ್ರ ದೊಂದಿಗೆ ಆಧಾರ್ ಕಾರ್ಡ್ ಮತ್ತು ಎಸ್ ಎಸ್ ಎಲ್ ಸಿ ಮೂಲ ಪ್ರತಿಯೊಂದಿಗೆ ಹಾಜರಿರಬೇಕೆಂದು ತಿಳಿಸಿದ್ದಾರೆ.