ಮೊಗ್ರ: 48 ದಿನಗಳ ನಿರಂತರ ಗಣಪತಿ ಹವನದ ಆರಂಭ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಗುತ್ತಿಗಾರು ಗ್ರಾಮದ ಮೊಗ್ರದ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ನಿರ್ಮಾಣ ಕಾರ್ಯದ ಅಂಗವಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ 48 ದಿನಗಳ ಕಾಲ ನಿರಂತರವಾಗಿ ನಡೆಯುವ ಗಣಪತಿ ಹವನವು ಮಾ.17 ರಂದು ಆರಂಭಗೊಂಡಿತು.

ಮೊಗ್ರದಲ್ಲಿ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನದ ನಿರ್ಮಾಣ ಹಾಗೂ ದೈವಸ್ಥಾನಗಳ ಅಭಿವೃದ್ದಿ ಕಾರ್ಯ ನಡೆಯಲಿದೆ. ಈ ಹಿಂದೆ ನಡೆದ ಅಷ್ಟಮಂಗಲ ಚಿಂತನೆಯ ಪ್ರಕಾರ ನಿರ್ಮಾಣವಾಗುವ ಈ ಕಾರ್ಯವು ನಿರ್ವಿಘ್ನವಾಗಿ ನಡೆಯಲು ಹಾಗೂ ಊರಿನ ಸಮಸ್ತ ಭಕ್ತರ ಹಿತಕ್ಕಾಗಿ 48 ದಿನಗಳ ಕಾಲ ನಿರಂತರವಾಗಿ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ನಿರ್ಮಾಣ ಸ್ಥಳದಲ್ಲಿ ಗಣಹವನ ನಡೆಯಲಿದೆ. 14 ಬೈಲುಗಳ ಸಹಕಾರದ ಮೂಲಕ ನಿರಂತರವಾಗಿ ಈ ಕಾರ್ಯ ನಡೆಯಲಿದೆ.

ವೇ.ಮೂ.ಕೃಷ್ಣ ಭಟ್‌ ಮಡಪ್ಪಾಡಿ ಅವರು ಗಣಪತಿ ಹವನ ನೆರವೇರಿಸಿದರು.

ಈ ಸಂದರ್ಭ ಮೊಗ್ರ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ಗೌಡ ಚಿಕ್ಮುಳಿ, ಗೌರವಾಧ್ಯಕ್ಷ ಗಂಗಾಧರ ಭಟ್‌ ಪುಚ್ಚಪ್ಪಾಡಿ, ಗೌರವ ಸಲಹೆಗಾರರುಗಳಾದ ವೆಂಕಟ್ರಮಣ ಎಂ ಎನ್‌, ದೊಡ್ಡಣ್ಣ ಗೌಡ ಚಿಕ್ಮುಳಿ, ಪ್ರಧಾನ ಸಂಚಾಲಕ ಸತ್ಯನಾರಾಯಣ ಮೊಗ್ರ, ಮೊಗ್ರ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದ ಮೊಕ್ತೇಸರ ಕಾರ್ಯಪ್ಪ ಗೌಡ ಚಿಕ್ಮುಳಿ, ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಉಮೇಶ್‌ ಮಕ್ಕಿ, ಕೋಶಾಧಿಕಾರಿ ಕುಮಾರಸ್ವಾಮಿ ಕಿನ್ನಿಕುಮೇರಿ, ಪ್ರಧಾನ ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ, ಸಮಿತಿ ಉಪಾಧ್ಯಕ್ಷರುಗಳಾದ ರಾಧಾಕೃಷ್ಣ ತುಪ್ಪದಮನೆ, ಚನ್ನಕೇಶವ ಕಮಿಲ, ಸೀತಾರಾಮ ಚಿಕ್ಮುಳಿ ಮೊದಲಾದವರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.