Breaking News

ಗ್ರಾಹಕರ ಸೋಗಿನಲ್ಲಿ ಬಂದು ಹಣ ದೋಚಲೆತ್ನಿಸಿದವರನ್ನು ಪೋಲೀಸರಿಗೊಪ್ಪಿಸಿದ ಊರವರು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದು ಎಲ್ಲ ವಸ್ತುಗಳ ಬೆಲೆ ಕೇಳಿ ಅಂಗಡಿಯವರನ್ನು ಏಮಾರಿಸಿ ಹಣ ದೋಚಲೆತ್ನಿಸುವ ಯುವರಕನ್ನು ಪೋಲೀಸರಿಗೊಪ್ಪಿಸಿದ ಘಟನೆ ಮಾ.17 ರಂದು ಗುತ್ತಿಗಾರಿನಿಂದ ವರದಿ ಯಾಗಿದೆ.

ಗುತ್ತಿಗಾರು ಪೇಟೆಯಲ್ಲಿ ಆಯುರ್ವೇದ ಜೌಷಧಿ ಮಾರುವವ ನೆಪದಲ್ಲಿ ಇಬ್ಬರು ಯುವಕರು ಶ್ರೀಕೃಷ್ಣ ಆಯಿಲ್ ಮಿಲ್ ಗೆ ಬಂದು ವಸ್ತುಗಳ ಬೆಲೆ ಕೇಳಿದರೆಂದೂ, ಬಳಿಕ ಮತ್ತೊಂದು ಅಂಗಡಿಗೂ ಹೋಗಿ ಇದೇ ರೀತಿ ಮಾಡುತ್ತಿದ್ದರೆನ್ನಲಾಗಿದೆ. ಎರಡು ವಾರದ ಹಿಂದೆ ಇಬ್ಬರು ಯುವಕರು ಶ್ರೀಕೃಷ್ಣ ಆಯಿಲ್ ಮಿಲ್ ಗೆ ಬಂದು ಅಂಗಡಿಯಿಂದ ಎರಡು ಸಾವಿರ ರೂ ಎಗರಿಸಿದ್ದರು.‌ ಮಾ.17 ರಂದು ಬಂದ ಯುವಕರ ನಡೆಯು ಇದೇ ರೀತಿ ಅನುಮಾನ ಬರುವಂತೆ ಇದ್ದುದರಿಂದ ಊರವರು ಕೆಲವರು ಸೇರಿ ಅವರನ್ನು ವಿಚಾರಿಸಿದರು. ಅವರು ನೀಡಿದ ಉತ್ತರದಲ್ಲಿ ಅನುಮಾನಗಳು ಗಟ್ಟಿಯಾದ್ದರಿಂದ ಊರವರು ಆ ಇಬ್ಬರು ಯುವಕರನ್ನು ಸುಬ್ರಹ್ಮಣ್ಯ ಪೋಲೀಸರಿಗೆ ಒಪ್ಪಿಸಿದರು.

ಸುಬ್ರಹ್ಮಣ್ಯ ಠಾಣೆಯಲ್ಲಿ ಪೋಲೀಸರು ಆ ಇಬ್ಬರನ್ನು ವಿಚಾರಿಸಿದಾಗ ಅವರಗಳು ಬೀದರ್ ನವರೆಂದು ಗೊತ್ತಾಯಿತು. ಆರ್ಯವೇದ ಜೌಷಧವನ್ನು ಅಂಗಡಿಗಳಿಗೆ ಮಾರುವವರಾಗಿದ್ದಾರೆ ಎಂಬುವುದಾಗಿ ತಿಳಿದು ಬಂತೆನ್ನಲಾಗಿದೆ. ಪೋಲೀಸರಿಗೆ ಆ ಯುವಕರನ್ನು ಒಪ್ಪಿಸಿದ ಗುತ್ತಿಗಾರಿನ ಊರವರು ಪೋಲೀಸ್ ಠಾಣೆಗೆ ಬಂದು ನಡೆದ ಘಟನೆಯನ್ನು ವಿವರಿಸಿದರು. ಪೋಲೀಸರು ಆ ಇಬ್ಬರಿಗೆ ಎಚ್ಚರಿಕೆ ನೀಡಿ, ಮುಚ್ಚಳಿಕೆ ಬರೆಯಿಸಿ ಕಳುಹಿಸಿಕೊಟ್ಟರೆಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.