Breaking News

ಮಾ. 21 : ನಿಂತಿಕಲ್ಲಿನಿಂದ ಸೂಲಂತ್ತಡ್ಕದವರೆಗೆ ರಸ್ತೆ ಬದಿ ಸ್ವಚ್ಛತಾ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಎಣ್ಮೂರು ನಾಗಬ್ರಹ್ಮ ಕೋಟಿಚೆನ್ನಯರ ನೇಮೋತ್ಸವ ಮಾ. 27ರಂದು ನಡೆಯಲಿದ್ದು, ಇದರ ಅಂಗವಾಗಿ ನಿಂತಿಕಲ್ಲಿನಿಂದ ಸೂಲಂತ್ತಡ್ಕದವರೆಗೆ ರಸ್ತೆ ಬದಿಯ ಗಿಡ, ಪೊದರುಗಳನ್ನು ಕಡಿಯುವ ಮೂಲಕ ಸ್ವಚ್ಛತಾ ಕಾರ್ಯಕ್ರಮವು ಮಾ.  21 ರಂದು ನಡೆಯಲಿದೆ. ನೇಮೋತ್ಸವದ ಸಲುವಾಗಿ ಸ್ವಾಗತ ಫಲಕಗಳನ್ನು ಅಳವಡಿಸುವ ಯೋಜನೆಯಿದ್ದು, ಈ ಸಂದರ್ಭದಲ್ಲಿ ರಸ್ತೆಯ ಬದಿಯನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಿಗೆ ಪ್ರೇರಣೆ ನೀಡುವ ಸಲುವಾಗಿ ಗರಡಿಯ ಆಡಳಿತದಾರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಸ್ವಚ್ಛತಾ ಅಭಿಯಾನ ನಡೆಯಲಿದೆ.
ಈ ಸಂದರ್ಭದಲ್ಲಿ ಬೆಳ್ಳಾರೆ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹಾಗೂ ಊರಿನ ಹಿರಿಯರು ಅಭಿಯಾನಕ್ಕೆ ಶುಭಹಾರೈಸಲಿದ್ದು, ಊರಿನ ಭಕ್ತಾದಿಗಳು, ಎಸ್.ಜಿ.ಫ್ರೆಂಡ್ಸ್‌ನ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಲಿದ್ದಾರೆಂದು ಕಾರ್ಯಕ್ರಮದ ಸಂಯೋಜಕ ಸುಜಿತ್ ರೈ ಪಟ್ಟೆ ಮಾಹಿತಿ ನೀಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.