ಜಗದೀಶ್ ಕುದ್ಕುಳಿ ಅವರು ದೇರಳಕಟ್ಟೆ ಯೇನೆಪೋಯ ಯೂನಿವರ್ಸಿಟಿಯಲ್ಲಿ ಇನ್ ವಿಟ್ರೊ ಕ್ಯಾರೆಕ್ಟರೈಸೇಶನ್ ಆಫ್ ಟೀತ್ ಆಂಡ್ ಟೆಸ್ಟಿಂಗ್ ಆಫ್ ಶೀಲ್ಡಿಂಗ್ ಮೆಟೀರಿಯಲ್ಸ್ ಇನ್ ರೇಡಿಯೋಥೆರಪಿ ಫಾರ್ ಹೆಡ್ ಆಂಡ್ ನೆಕ್ ಕ್ಯಾನ್ಸರ್ಸ್ ವಿಷಯದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಪಿಎಚ್ ಡಿ ಪದವಿ ನೀಡಿದೆ. ಇವರು ಮರ್ಕಂಜ ಗ್ರಾಮದ ಕುದ್ಕುಳಿ ಈಶ್ವರಪ್ಪ ಮತ್ತು ಪಿ.ಕೆ.ಶಶಿಕಲಾ ದಂಪತಿಯ ಪುತ್ರ ಮತ್ತು ಕುದ್ಕುಳಿ ಮೋನಪ್ಪ ಮತ್ತು ಮಲ್ಲಮ್ಮ ದಂಪತಿಗಳ ಮೊಮ್ಮಗ. ಕೇರಳದ ಕೊಚ್ಚಿಯಲ್ಲಿರುವ ಕರ್ಕಿನೋಸ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್ನಲ್ಲಿ ರಿಸರ್ಚ್ ಎಕ್ಸಿಕ್ಯೂಟಿವ್ ವೃತ್ತಿ ನಡೆಸುತ್ತಿದ್ದಾರೆ. ಪ್ರಸ್ತುತ ಅಳಿಕೆ ಗ್ರಾಮದ ಉಕ್ಕುಡ ದರ್ಬೆ ಎಂಬಲ್ಲಿ ವಾಸಿಸುತ್ತಿದ್ದಾರೆ.