Breaking News

ಐವರ್ನಾಡು : ಶ್ರೀ ಎಡಮಲೆ ಇರ್ವೆರ್ ಉಳ್ಳಾಕುಲು ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ, ಸನ್ಮಾನ

ಐವರ್ನಾಡು ಗ್ರಾಮದ ಶ್ರೀ ಎಡಮಲೆ ಇರ್ವೆರ್ ಉಳ್ಳಾಕುಲು ಮತ್ತು ಪರಿವಾರ ದೈವಗಳು ಪೇರಡ್ಕ – ಮಾಡ ವಾರ್ಷಿಕ ನೇಮೋತ್ಸವವು ಮಾ.18 ಮತ್ತು ಮಾ.19 ರಂದು ನಡೆಯಿತು.
ಮಾ.18 ರಂದು ರಾತ್ರಿ ಧಾರ್ಮಿಕ ಉಪನ್ಯಾಸ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.
ಯಕ್ಷಗಾನ ಕಲಾವಿದ ನಾರಾಯಣ ಗೌಡ ಕೊಳ್ತಿಗೆ ಧಾರ್ಮಿಕ ಉಪನ್ಯಾಸ ನೀಡಿ ತುಳುನಾಡಿನ ಸಂಸ್ಕೃತಿ ಉಳಿಯಬೇಕಾದರೆ ಇಂದಿನ ಪೀಳಿಗೆಗೆ ಧಾರ್ಮಿಕ ಆಚರಣೆಗಳ ಮಹತ್ವವನ್ನು ಹಿರಿಯರು ತಿಳಿಸಬೇಕು.ಆಗ ಪರಂಪರೆ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಹೇಳಿದರು.
ನಿವೃತ್ತ ಯೋಧರಾದ ಶ್ರೀಧರ ಸಾರಕರೆ, ರೋಹಿತ್ ಕುಳ್ಳಂಪಾಡಿ,ಹಿರಿಯ ಯಕ್ಷಗಾನ ಕಲಾವಿದ ನಾರಾಯಣ ಗೌಡರವರನ್ನು ಶಾಲು ಹೊದಿಸಿ, ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ಎಡಮಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ನಾಲ್ಕುಮನೆ ಆಡಳ್ತೆದಾರರಾದ ಕುಳ್ಳಂಪಾಡಿ ಎಲ್ಯಣ್ಣ ಗೌಡ, ಎಡಮಲೆ ಗುರುಪ್ರಸಾದ್, ಕೀಲಾಡಿ ರಾಮಚಂದ್ರ ಗೌಡ, ಮಿತ್ತಮೂಲೆ ದಾಮೋದರ ಗೌಡ, ಆಡಳ್ತೆದಾರರಾದ ಆಲಿಕಲ್ಲು ಗಿರಿಧರ ಗೌಡ, ಬಿರ್ಮುಕಜೆ ಗಂಗಾಧರ ಗೌಡ, ಕುಳ್ಳಂಪಾಡಿ ನೀಲಪ್ಪ ಗೌಡ, ಮಿತ್ತಮೂಲೆ ಮೋನಪ್ಪ ಗೌಡ, ಕತ್ಲಡ್ಕ ಜಯರಾಮ ಗೌಡ, ಸಾರಕರೆ ರುಕ್ಮಯ್ಯ ಪೂಜಾರಿ, ಶಾಂತಿಮೂಲೆ ಪುರಂದರ ನಾಯ್ಕ ಉಪಸ್ಥಿತರಿದ್ದರು.
ಎಡಮಲೆ ಇರ್ವೆರ್ ಉಳ್ಳಾಕುಲು ದೈವಗಳ ಬಗ್ಗೆ ರವಿ ಪಾಂಬಾರು ಎಂಬವರು ಧ್ವನಿ ಸುರುಳಿಯೊಂದನ್ನು ರಚಿಸಿದ್ದು ಇದನ್ನು ಬಿಡುಗಡೆಗೊಳಿಸಲಾಯಿತು.
ಸತೀಶ್ ಎಡಮಲೆ ಸ್ವಾಗತಿಸಿ, ಎಲ್ಯಣ್ಣ ಗೌಡ ಕುಳ್ಳಂಪಾಡಿ ವಂದಿಸಿದರು.
ಸಭಾಕಾರ್ಯಕ್ರಮ ನಡೆದ ಬಳಿಕ ಡಿ.ಯುನೈಟೆಡ್ ಸುಳ್ಯ ಇವರಿಂದ ಕಾರ್ಯಕ್ರಮ ವೈವಿಧ್ಯ ನಡೆಯಿತು.

ಕಾರ್ಯಕ್ರಮಗಳು : ಮಾ.12 ರಂದು ಮುಹೂರ್ತದ ಗೊನೆ ಕಡಿಯಲಾಯಿತು.
ಮಾ.18 ರಂದು ಬೆಳಿಗ್ಗೆ ಸ್ಥಳ ಶುದ್ಧಿ, ಆಯುಧ ಶುದ್ಧಿ, ತಂಬಿಲ ಸೇವೆ ನಡೆಯಿತು.
ಸಂಜೆ ನೂಜಾಲು ಮಾಳ್ಯದಿಂದ ಭಂಡಾರ ತೆಗೆಯಲಾಯಿತು.
ರಾತ್ರಿ ಗಂಟೆ 11.30 ಕ್ಕೆ ಮುಡಿಯಾಗಿ ಪಲಯ ನೇಮ ನಡಾವಳಿ ನಡೆಯಿತು.
ಮಾ.19 ರಂದು ಮೆಗ್ಯ ನೇಮ ನಡಾವಳಿ ಪ್ರಾರಂಭವಾಯಿತು, ನಂತರವ ಪ್ರಸಾದ ವಿತರಣೆ,ಬಟ್ಟಲು ಕಾಣಿಕೆ ನಡೆಯಿತು.
ನಂತರ ನಾಯರ್ ದೈವದ ನೇಮ ನಡೆಯಿತು.
ಮಧ್ಯಾಹ್ನ ಗಂಟೆ 12.30 ಕ್ಕೆ ಪುರುಷ ದೈವದ ಮತ್ತು ಉಪದೈವಗಳ ಕೋಲ ನಡೆಯಿತು.
ನಂಯರ ಅನ್ನಸಂತರ್ಪಣೆ ನಡೆಯಿತು.
ಸಂಜೆ ದೈವದ ಭಂಡಾರವನ್ನು ಅಂಗಡಿಮಜಲು ಮಾಳ್ಯಕ್ಕೆ ಸಾಗಿಸಲಾಯಿತು.
ಈ ಸಂದರ್ಭದಲ್ಲಿ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.