Breaking News

ಯೇನೆಕಲ್ಲು : ಅಧಿಕಾರಿಗಳ ಗ್ರಾಮ ವಾಸ್ತವ್ಯ

Advt_Headding_Middle
Advt_Headding_Middle
Advt_Headding_Middle
Advt_Headding_Middle

ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಿಲ್ಲಾಧಿಕಾರಿ ನಡೆ ಹಳ್ಳಿಗಳೆಡೆಗೆ ಪರಿಕಲ್ಪನೆಯ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾ. 20 ಯೇನೆಕಲ್ಲು ಗ್ರಾಮದ ಬಾಲಾಡಿ ಶ್ರೀ ಆದಿಶಕ್ತಿ ಭಜನಾ ಮಂದಿರದಲ್ಲಿ ನಡೆಯಿತು. ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಲಿತಾ ಗುಂಡಡ್ಕರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಕ್ಷೇತ್ರದ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ ಉದ್ಘಾಟಿಸಿದರು. ಕಡಬ ತಹಶೀಲ್ದಾರರಾದ ಅನಂತಶಂಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಆದಿಶಕ್ತಿ ಭಜನಾ ಮಂಡಳಿ ಹಾಗೂ ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ, ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯರುಗಳಾದ ಶ್ರೀಮತಿ ಭವ್ಯ ಕುಮಾರಿ ಜೇನುಕೋಡಿ, ಶಿವರಾಮ ನೆಕ್ರಾಜೆ, ಮೋಹನ್ ಕೋಟಿಗೌಡನಮನೆ, ಶ್ರೀಮತಿ ಪುಷ್ಪಾವತಿ, ಶ್ರೀಮತಿ ಜಯಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೇದಿಕೆಯ ಮುಂಭಾಗದ ಅಧಿಕಾರಿಗಳ ಸಾಲಿನಲ್ಲಿ ಸುಳ್ಯ ಸಿ.ಡಿ.ಪಿ.ಒ. ಶ್ರೀಮತಿ ರಶ್ಮೀ ಅಶೋಕ್ ನೆಕ್ರಾಜೆ, ಶಿಕ್ಷಣ ಇಲಾಖೆಯ ವಸಂತ ಯೇನೆಕಲ್ಲು, ಲೋಕೋಪಯೋಗಿ ಇಲಾಖೆಯ ಸುಬ್ರಹ್ಮಣ್ಯ, ಸಮಾಜ ಕಲ್ಯಾಣ ಇಲಾಖೆಯ ಕೃಷ್ಣಪ್ಪ ಗೌಡ, ಅರಣ್ಯ ಇಲಾಖೆಯ ಮಂಜುನಾಥ್, ಭೂಮಾಪನಾ ಇಲಾಖೆಯ ಚಂದ್ರಶೇಖರ ಮೂರ್ತಿ, ಪಶು ಸಂಗೋಪನಾ ಇಲಾಖಾ ಸಿಬ್ಬಂದಿ ಅಜಿತ್, ಕೃಷಿ ಇಲಾಖೆಯ ಅಧಿಕಾರಿ ತಿಮ್ಮಪ್ಪ ಗೌಡ, ಸುಬ್ರಹ್ಮಣ್ಯ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ ಭಾಗವಹಿಸಿ ಮಾಹಿತಿ ನೀಡಿದರು. ಸಾರ್ವಜನಿಕರು ತಮ್ಮ ಅಹವಾಲನ್ನು ಅಧಿಕಾರಿಗಳಿಗೆ ತಿಳಿಸಿ ಅರ್ಜಿಗಳನ್ನು ಸಲ್ಲಿಸಿದರು. ಕಡಬ ಕಂದಾಯ ನಿರೀಕ್ಷರಾದ ಅವಿನ್ ರಂಗತ್ತಮಲೆ ಸ್ವಾಗತಿಸಿದರು. ಶಿಕ್ಷಕ ವಿಜಯಕುಮಾರ್ ಅಮೈ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.