Breaking News

ಮಹಿಳಾ ಸಮಾನತೆ ಭಾಷಣಗಳಲ್ಲಿ ಸಾಲದು, ಅವಕಾಶಗಳಲ್ಲಿ ಬೇಕು: ಡಾ. ತೇಜಸ್ವಿನಿ ರಮೇಶ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಬಿಜೆಪಿ ಸರಕಾರದ ಅವಧಿಯಲ್ಲೇ ಮಹಿಳಾ ಮೀಸಲು ಪ್ರಮಾಣ ಹೆಚ್ಚಳ : ಗೀತಾ ವಿವೇಕಾನಂದ

ಪಂಜದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಮಾತೃವಂದನಾ ಕಾರ್ಯಕ್ರಮ

ಮಹಿಳೆಯರಲ್ಲಿ ಮಲ್ಟಿ ಟ್ಯಾಲೆಂಟ್ ಇದೆ. ಸರ್ವಾಂಗೀಣ ತಾಕತ್ತಿನ ಮೂಲಕ ಸಮಾಜ ಮುನ್ನಡೆಸಲು ಮಹಿಳೆಯರಿಂದ ಮಾತ್ರ ಸಾಧ್ಯ ಇದೆ. ಇಂತಹ ಮಹಿಳೆಯರಿಗೆ ಸಮಾನತೆ ಭಾಷಣಗಳಲ್ಲಿ ಸಾಲದು, ಅವಕಾಶಗಳಲ್ಲಿ ಬೇಕು ಎಂದು ವಿಧಾನಪರಿಷತ್ ಸದಸ್ಯೆ ಡಾ.ತೇಜಸ್ವಿನಿ ರಮೇಶ್ ಹೇಳಿದರು.
ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ, ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಇಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಸುಳ್ಯ ವಿಧಾನ ಸಭಾ ಕ್ಷೇತ್ರ ಮಟ್ಟದ ಮಹಿಳಾ ಸಮಾವೇಶ “ಮಾತೃ ಸಂಗಮ”ದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಭಾಷಣಗಳಲ್ಲಿ ಮಾತ್ರ ಸಮಾನತೆ ಸಾಲದು, ಶಾಸನಗಳಲ್ಲಿ ಬೇಕು. ಶಾಸನಗಳಲ್ಲಿ ಆಗಬೇಕಾದರೆ ಮಹಿಳೆಯರು ರಾಜಕಾರಣದಲ್ಲಿ ಸಕ್ರಿಯರಾಗಿ ಅವರಿಗೆ ಆದ್ಯತೆ ಸಿಗಬೆಕು. ನಮ್ಮ ಹಕ್ಕುಗಳ ಪ್ರಶ್ನೆ ಬಂದಾಗ ಯಾರನ್ನೇ ಆಗಲಿ ಪ್ರಶ್ನಿಸುತ್ತೇವೆ. ಸಂಘಟನೆಯಲ್ಲಿ, ಪಕ್ಷದಲ್ಲಿ, ಸಮಾಜದಲ್ಲಿ ಪ್ರಶ್ನಿಸುವುದಕ್ಕೆ ಹಿಂದೆ ಬೀಳುವುದಿಲ್ಲ. ಹಿಂದೆ ಇದ್ದವರು ಏನೂ ಮಾಡಿಲ್ಲ ಎಂದೇ ಜನ ನಮ್ಮನ್ನು ಆಡಳಿತಕ್ಕೆ ತಂದಿದ್ದಾರೆ. ಸಾಧನೆ ನಮ್ಮ ಕರ್ತವ್ಯವಾಗಬೇಕು. ಅಲ್ಲದಿದ್ದರೆ ಹಿಂದಿನವರಿಗೆ ಏನಾಗಿದೆಯೋ ಅದೇ ನಮಗೂ ಆಗುತ್ತದೆ ಎಂಬ ಎಚ್ಚರ ಬೇಕು. ಬಿಜೆಪಿಯಲ್ಲಿ ಆ ಎಚ್ಚರ ಇರುವುದರಿಂದಲೇ ಅನೇಕ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಯಿತು. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗಲು ಸಾಧ್ಯವಾಯಿತು ಎಂದು ಡಾ.ತೇಜಸ್ವಿನಿ ರಮೇಶ್ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಗೀತಾ ವಿವೇಕಾನಂದರವರು, ದೇಶ ಉದ್ಧಾರ ಆಗಬೇಕಾದರೆ ಮಹಿಳೆಯರ ಪರಿಸ್ಥಿತಿಯೂ ಉದ್ಧಾರವಾಗಬೇಕು. ಸ್ತ್ರೀ ಸಮಾನತೆಯ ಬಗ್ಗೆ ಈಗ ಹೆಚ್ಚು ಚರ್ಚೆ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಹಿಳಾ ಕಲ್ಯಾಣಕ್ಕೆ ಅನೇಕ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಮಹಿಳೆಯರ ಮೀಸಲು ಪ್ರಮಾಣ ಹೆಚ್ಚಬೇಕು, ಅದು ಬಿಜೆಪಿ ಸರಕಾರದಿಂದಲೇ ಆಗುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.