ಸುಳ್ಯ ತಮಿಳು ಕಲಾವಿದರ ವೇದಿಕೆ ಮಾ.19 ರಂದು ಅಸ್ತಿತ್ವಕ್ಕೆ ಬಂದಿದೆ.
ಸಪ್ತಸ್ವರ ಸಂಗೀತ ಶಾಲೆಯಲ್ಲಿ ತಮಿಳು ಕಲಾವಿದರ ಸಭೆಯನ್ನು ಕರೆಯಲಾಯಿತು. ಕಲಾವಿದರ ಸುಪ್ತ ಪ್ರತಿಭೆಗಳನ್ನು ಹೊರತರುವ ಉದ್ದೇಶದಿಂದ ವೇದಿಕೆ ರೂಪುಗೊಂಡಿತು.
ಅಧ್ಯಕ್ಷರಾಗಿ ಗಾಯಕ ಕನ್ನದಾಸನ್ ಎಸ್. ಕುಕ್ಕಂದೂರು ಇವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಮುತ್ತುಕುಮಾರಿ ಶಂಕರ್ಲಿಂಗಂ ತೊಡಿಕಾನ, ಖಜಾಂಜಿಯಾಗಿ ಶ್ರೀ ದೇವದಾಸ್ ಪೊನ್ವಳ್ಳಿ ಗುತ್ತಿಗಾರು, ಉಪಾಧ್ಯಕ್ಷರಾಗಿ ಶ್ರೀಮತಿ ಪರಿಮಳ ಸದಾನಂದ ಐವರ್ನಾಡು, ಪೆರುಮಾಳ್ ಲಕ್ಷ್ಮಣ ಐವರ್ನಾಡು, ಜೊತೆ ಕಾರ್ಯದರ್ಶಿಯಾಗಿ ಶಿವಕುಮಾರನ್ ಕುಕ್ಕಂದೂರು , ಶ್ರೀಮತಿ ರೇಖಾ ಅರುಣ್ ಪೈಲಾರು ಅಲ್ಲದೆ ವೇದಿಕೆಯ ಗೌರವ ಸಲಹೆಗಾರರಾಗಿ ಗಣೇಶ್ ಕುಮಾರ್ ಸೇಲಂ ಹಾಗೂ ನಿವೃತ ಅಧ್ಯಾಪಕರಾದ ಜಿ.ಎಂ. ನಾರಾಯಣ ಸ್ವಾಮಿ ಸೋಣಂಗೇರಿ ಇವರನ್ನು ಆಯ್ಕೆ ಮಾಡಲಾಯಿತು, ಉಳಿದಂತೆ ಎಲ್ಲಾ ಸದಸ್ಯರೂ ಕಲಾವೇದಿಕೆಯ ನಿರ್ದೇಶಕರಾಗಿರುತ್ತಾರೆ. ಎಪ್ರಿಲ್ 14 ರಂದು ಕಲಾ ವೇದಿಕೆಯ ಉದ್ಘಾಟನೆ ನಡೆಯಲಿರುವುದು. ಶ್ರೀಮತಿ ರೇಖಾ ಪ್ರಾರ್ಥಿಸಿದರು. ಶ್ರೀಮತಿ ಪರಿಮಳ ಸ್ವಾಗತಿಸಿ , ಶಿವಕುಮಾರನ್ ವಂದಿಸಿದರು . ದೇವದಾಸ್ ಪೊನ್ವಳ್ಳಿ ಸಭಾ ನಡಾವಳಿಯನ್ನು ನಡೆಸಿಕೊಟ್ಟರು.