ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಘನತ್ಯಾಜ್ಯ ನಿರ್ವಹಣೆ ಮತ್ತು ಶುಚಿತ್ವ ಬಗ್ಗೆ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ,ಸಾರ್ವಜನಿಕ ಪರಿಸರ ಶುಚಿತ್ವ ಹಾಗೂ ಸ್ವಚ್ಚ ಭಾರತ್ ಮಿಷನ್ ಕಾರ್ಯಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಬಗ್ಗೆ ಎಲ್ಲಾ ಜನಪ್ರತಿನಿಧಿಗಳು ಸಂಘ ಸಂಸ್ಥೆಗಳು ,ವಾಹನ ಚಾಲಕ,ಮಾಲಕರ ಸಂಘ ,ವರ್ತಕರ ಸಂಘ ,ಊರಿನ ಸ್ವಚ್ಚ ಪ್ರಮುಖರ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ ಇವರ ಅಧ್ಯಕ್ಷತೆಯಲ್ಲಿ ಮಾ.6 ರಂದು ಐವರ್ನಾಡು ಗ್ರಾಮ ಪಂಚಾಯತ್ ಗ್ರಾಮ ವಿಕಾಸ ಸಭಾಭವದಲ್ಲಿ ನಡೆಯಿತು.

 


ಸಭೆಯಲ್ಲಿ ಐವರ್ನಾಡು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್ .ಮನ್ಮಥ ,ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸುಜಾತ ಪವಿತ್ರಮಜಲು ಹಾಗೂ ಸಭೆಯಲ್ಲಿ ಸಂಘ ಸಂಸ್ಥೆ ಪ್ರತಿನಿಧಿಗಳು ,ಸ್ವಸಹಾಯ ಸಂಘದ ಸದಸ್ಯರು ಹಾಗೂ ಸ್ವಚ್ಚಪ್ರಮುಖರು ಉಪಸ್ಥಿತರಿದ್ದರು.
ಸಭೆಯಲ್ಲಿ ಎಲ್ಲಾ ಸಂಘ –ಸಂಸ್ಥೆಗಳ ಪ್ರತಿನಿಧಿಗಳನ್ನೂಳಗೊಂಡಂತೆ ಐವರ್ನಾಡು ಗ್ರಾಮ ಪಂಚಾಯತ್ ಮಟ್ಟದ ಸ್ವಚ್ಚಭಾರತ್ ಮಿಷನ್ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಸಲಹಾ ಸಮಿತಿಯ ಅಧ್ಯಕ್ಷರಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಎಸ್ .ಎನ್ ಮನ್ಮಥ ಹಾಗೂ ಮಾಧವ ಭಟ್ ಶೃಂಗೇರಿ ಇವರು ಸಂಚಾಲಕರಾಗಿರುವ ಈ ಕೆಳಗಿನ ಸಹ ಸಂಚಾಲಕರನ್ನೂಳಗೊಂಡಂತೆ ಸಂಚಾಲಕ ಸಮಿತಿಯನ್ನು ರಚಿಸಲಾಯಿತು. ಸಹ ಸಂಚಾಲಕರಾಗಿ ಶ್ರೀಮತಿ ಚಂದ್ರಾವತಿ, ಜನಾರ್ಧನ ವರ್ತಕರು, ಶಾಂತರಾಮ ಕಣಿಲೆಗುಂಡಿ ,ನವೀನ್ ಚಾತುಬಾಯಿ,ಜಯಂತಿ ನೂಜಾಲು ,ಸಂಪ್ರೀತ್ ಮಿತ್ತಮೂಲೆ ,ರಾಜೇಶ್ ಭಟ್ ಬಾಂಜಿಕೋಡಿ ,ಜಯಂತ ಬೋಳುಗುಡ್ಡೆ ,ಪೊನ್ನುರಾಜ್ ನಾಟಿಕೇರಿ ,ಶರೀಫ್ ನಿಡುಬೆ ಇವರನ್ನು ರಚಿಸಲಾಯಿತು.ತದನಂತರ ಸಭೆಯಲ್ಲಿ ವಿಸ್ಕೃತವಾಗಿ ಚರ್ಚಿಸಿ ಪ್ರತಿ ತಿಂಗಳ ಮೊದಲ ಆದಿತ್ಯವಾರ ಪೂರ್ವಾಹ್ನ ಗಂಟೆ 7.00ರಿಂದ 9.00ರ ತನಕ ಗ್ರಾಮ ಪಂಚಾಯತ್ ಮಟ್ಟದ ಆಯ್ದ ಒಂದೊಂದು ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಪ್ರತಿ ತಿಂಗಳ ಮೊದಲ ಆದಿತ್ಯವಾರದಂದು ಸ್ವಚ್ಚತಾ ಶ್ರಮದಾನವನ್ನು ಮಾಡುವುದಾಗಿ ತೀರ್ಮಾನಿಸಲಾಯಿತು.ನಂತರ ಸಭೆಯನ್ನು ಉದ್ದೇಶಿಸಿ. ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯರು ಎಸ್.ಎನ್ ಮನ್ಮಥ ರವರು ಸ್ವಚ್ಚತಾ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು 2 ಸಂಘ-ಸಂಸ್ಥೆಗಳನ್ನು ಹಾಗೂ 10ಮಂದಿಯನ್ನು ಗುರುತಿಸಿ ಪ್ರತಿ ವರ್ಷ ಪುರಸ್ಕರಿಸಬೇಕೆಂದು ನೀಡಿದ ಸಲಹೆಯನ್ನು ಅಂಗೀಕರಿಸಲಾಯಿತು. ನಂತರ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಮಾತನಾಡಿ ಎಲ್ಲರ ಸಹಕಾರದಲ್ಲಿ “ತ್ಯಾಜ್ಯ ಮುಕ್ತದತ್ತ ನಮ್ಮ ಗ್ರಾಮ’’ ತ್ಯಾಜ್ಯ ಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ಕರೆ ನೀಡಿದರು .
ಪಂಚಾಯತ್ ಅಭಿವೃದ್ದಿ ಅಧಿಕಾರಿ ಶೇಖರ್ ಯು.ಡಿ ಶೇಖರ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.