ಕೃಷಿ ಇಲಾಖೆಯ ಆತ್ಮ ಯೋಜನೆಯಡಿಯಲ್ಲಿ ಕೊಡಮಾಡುವ ತಾಲೂಕು ಕೃಷಿ ಪ್ರಶಸ್ತಿಗೆ ಆಯ್ಕೆಯಾದ ತಾಲೂಕಿನ 7 ಮಂದಿ ಕೃಷಿ ಪ್ರಶಸ್ತಿ ನೀಡಲಾಯಿತು.
ಹೈನುಗಾರಿಕೆಯಲ್ಲಿ ಜಿಲ್ಲಾ ಪ್ರಶಸ್ತಿ ಪಡೆದ ವಿಶ್ವನಾಥ ಪೈ, ತೋಟಗಾರಿಕಾ ಘಟಕದಡಿ ಸಮಗ್ರ ಕೃಷಿಗೆ ನೀಡಲಾಗುವ ಕೃಷಿ ಪ್ರಶಸ್ತಿಗೆ ಸುದ್ದಿ ಬಿಡುಗಡೆಯ ಕೃಷಿ ವಿಭಾಗದ ಕೆ.ಟಿ ಭಾಗೀಶ್, ಸಮಗ್ರ ಕೃಷಿ ಪದ್ದ ತಿ ಘಟಕದಡಿ ನೀಡುವ ಪ್ರಶಸ್ತಿ ಕೊಲ್ಲಮೊಗ್ರದ ಜಯಪ್ರಕಾಶ್ ಕಟ್ಟ, ಸಾವಯವ ಕೃಷಿ ಪ್ರಶಸ್ತಿ ಗೆ ಆಲೆಟ್ಟಿಯ ಕೃಷ್ಣಪ್ರಸಾದ್ ಕೆ, ಸಮಗ್ರ ಕೃಷಿ ಪದ್ದತಿ ಘಟಕದಡಿ ನೀಡುವ ಪ್ರಶಸ್ತಿ ಗೆ ಕಲ್ಮಡ್ಕದ ಕೃಷ್ಣಪ್ಪ ಪಾಲಾರ್, ತೋಟಗಾರಿಕಾ ಘಟಕದಡಿ ನೀಡುವ ಪ್ರಶಸ್ತಿ ಗೆ ಗುತ್ತಿಗಾರಿನ ರಾಕೇಶ್ ಎಂ.ಸಿ., ಜೇನು ಕೃಷಿಯಲ್ಲಿ ಯೇನೆಕಲ್ಲಿನ ಮುರಳೀಧರ ಜಿ.ಟಿ. ಪ್ರಶಸ್ತಿ ಸ್ವೀಕರಿಸಿದರು. ಸಚಿವ ಎಸ್ ಅಂಗಾರ ಹಾರ, ಶಾಲು, ಸ್ಮರಣಿಕೆ, ಫಲ, ಪಶಸ್ತಿ ಪತ್ರ ನೀಡಿ ಗೌರವಿಸಿದರು.