ಸುಳ್ಯ ಶ್ರೀ ಶಾರದಾ ಮಹಿಳಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಮಾ. ೧೯ ರಂದು ಅಮರ ಸುಳ್ಯದ ಆರ್ಥಿಕ ಬಂಡಾಯ ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಪ್ರಭಾಕರ ಶಿಶಿಲರವರು ಮಾತನಾಡಿದರು.
ಅವರು ೧೮೩೭ರಲ್ಲಿ ಬ್ರಿಟಿಷರ ವಿರುದ್ಧ ಕ್ರಾಂತಿ ನಡೆಸಿದ ಸುಳ್ಯದ ರೈತರ ಹೋರಾಟವನ್ನು ವಿವರಿಸಿದರು. ಅದಕ್ಕಾಗಿ ಬಲಿದಾನವಾದ ಜನತೆಯನ್ನು ಸ್ಮರಿಸಿದರು. ಅವರೆಲ್ಲರ ತ್ಯಾಗದ ಫಲವಾಗಿ ನಾವು ಇಂದು ಸ್ವತಂತ್ರ ರಾಗಿದ್ದೇವೆ. ಸುಳ್ಯದ ಅಂದಿನ ಮತ್ತು ಇಂದಿನ ಆರ್ಥಿಕ ಸ್ಥಿತಿಗತಿಯ ಬಗ್ಗೆ ವಿವರಿಸಿದರು. ಪ್ರಾಂಶುಪಾಲೆ ಜ್ಯೋತ್ಸ್ನಾ ಕೆ. ಅಧ್ಯಕ್ಷತೆ ವಹಿಸಿದ್ದರು ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ವಿದ್ಯಾ ಕೆ ಸ್ವಾಗತಿಸಿ ಪ್ರಥಮ ಬಿ ಎ ಸೆಮೀರಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ದ್ವಿತೀಯ ಬಿಕಾಂ ದಿಶಾಲಿ ವಂದಿಸಿ, ದ್ವಿತೀಯ ಬಿಎ ಅಂಜಲಿ ದೇರಾಜೆ ಕಾರ್ಯಕ್ರಮ ನಿರೂಪಿಸಿದರು.