ಸುಳ್ಯ ತಾಲೂಕು ಅಡುಗೆ ಸಿಬ್ಬಂದಿಗಳಿಗೆ ಸುಳ್ಯ ,ಬೆಳ್ಳಾರೆ , ಗುತ್ತಿಗಾರು ಕೇಂದ್ರಗಳಲ್ಲಿ ಸ್ವಚತೆ, ಸುರಕ್ಷತೆ, ಹಾಗುಶುಚಿ ರುಚಿಯಾದ ಅಡುಗೆ ಮಾಡುವ ಬಗ್ಗೆ ಮತ್ತು ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ತರಬೇತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುಬ್ರಹ್ಮಣ್ಯ, ಹಾಗೂ ಶಿಕ್ಷಣ ಸಂಯೋಜಕ ವಸಂತ್ ಎನೇಕಲ್ ಸಹಕರಿಸಿದರು. ಬೆಳ್ಳಾರೆ ಕೇಂದ್ರದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಉಪ ಪ್ರಾಂಶುಪಾಲರು ಆದ ಶ್ರೀಮತಿ ಉಮಾಕುಮಾರಿ ಉದ್ಘಾಟಿಸಿ ಪ್ರಾಥಮಿಕ ವಿಭಾಗದ ಮುಖ್ಯಸ್ಥ ಮಾಯಿಲ ಪ್ಪ ಅತಿಥಿಗಳಾಗಿ ಭಾಗವಹಿಸಿದ್ದರು. ಸಿ ಆರ್ ಪಿ ಸವಿತಾ ಇವರು ವಂದಿಸಿದರು .
ಸುಳ್ಯದಲ್ಲಿ ಸೈಂಟ್ ಬ್ರಿಜಿಡ್ಸ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಆಂಟನಿ ಮೇರಿ ಇವರು ಕಾರ್ಯಕ್ರಮ ಉದ್ಘಾಟಿಸಿದರು. ಸಿ ಆರ್ ಪೀ. ಗೋಪಾಲಕೃಷ್ಣ ಸಹಕರಿಸಿದರು.ಗುತ್ತಿಗಾರಿನಲ್ಲಿ ಪ್ರೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕೇಶ್ವರ ಡಿ ಆರ್ ಉದ್ಘಾಟಿಸಿದರು. ಮುಖ್ಯಶಿಕ್ಷಕ ನೆಲ್ಸನ್ ಇವರು ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮ ಸಂಯೋಜನೆಯನ್ನು ಚಂದ್ರಶೇಖರ್ ಪೇರಾಲ್ ನಿರ್ವಹಿಸಿದರು.
ಶ್ರೀಮತಿ ಶೋಭಾ ಹಾಗೂ ವಿಜೇತ್ ಎಮ್ ಸಿ ಇವರು ಸಹಕರಿಸಿದರು.