ಮುಪ್ಪೇರ್ಯ ಗ್ರಾಮದ ಮೂಲೆಮಜಲು ದೋಳ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ನೇಮ ಮಾ. 2೦ರಂದು ನಡೆಯಿತು. ಬೆಳಿಗ್ಗೆ ಬ್ರಹ್ಮರ ಉತ್ಸವ, ಸಂಜೆ ಬೈದರ್ಕಳ ಭಂಡಾರ ತೆಗೆದು, ರಾತ್ರಿ ಕಾಸರಗೋಡು ಪುಳ್ಕೂರು ಶ್ರೀ ಮಹಾದೇವ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಬಾಳಿಲ ಮುಪ್ಪೇರ್ಯ ಶ್ರೀ ಮಹಾವಿಷ್ಣು ಸಿಂಗಾರಿ ಮೇಳದವರಿಂದ ಚೆಂಡೆ ವಾದನ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಬ್ರಹ್ಮ ಬೈದರ್ಕಳ ಗರಡಿ ಇಳಿಯುವುದು, ಮಾನಿಬಾಲೆ ಗರಡಿ ಇಳಿಯುವುದು ಮರುದಿನ ಬೆಳಿಗ್ಗೆ ಕೋಟಿ-ಚೆನ್ನಯರ ದರ್ಶನ (ಸೇಟು), ಗಂಧಪ್ರಸಾದ ವಿತರಣೆ ನಡೆಯಿತು.
ಸಚಿವ ಅಂಗಾರ ಭೇಟಿ
ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವಕ್ಕೆ ರಾತ್ರಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್ ಅಂಗಾರ ಭೇಟಿ ನೀಡಿ ಗರಡಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮೂಲೆಮಜಲು ದೋಳ ಗರಡಿಯಲ್ಲಿ ಸಚಿವರನ್ನು ಸನ್ಮಾನಿಸಲಾಯಿತು.