ಸುಳ್ಯ ಪ್ರೆಸ್ ಕ್ಲಬ್ಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾ.19ರಂದು ನಡೆಯಿತು.
ನೂತನ ಅಧ್ಯಕ್ಷರಾಗಿ ಹರೀಶ್ ಬಂಟ್ವಾಳ್, ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಕಲ್ಲಪಳ್ಳಿ ಆಯ್ಕೆಯಾಗಿದ್ದಾರೆ.
ಮಾ.19ರಂದು ನಡೆದ ಪ್ರೆಸ್ಕ್ಲಬ್ ಸದಸ್ಯರ ಸಭೆಯಲ್ಲಿ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಲೋಕೇಶ್ ಪೆರ್ಲಂಪಾಡಿ, ಕೋಶಾಧಿಕಾರಿಯಾಗಿ ಯಶ್ವಿತ್ ಕಾಳಮ್ಮನೆ, ನಿರ್ದೇಶಕರಾಗಿ ಗಂಗಾಧರ ಮಟ್ಟಿ, ಕೃಷ್ಣ ಬೆಟ್ಟ, ಜಯಪ್ರಕಾಶ್ ಕುಕ್ಕೆಟ್ಟಿ, ಜೆ.ಕೆ.ರೈ, ಶರೀಫ್ ಜಟ್ಟಿಪಳ್ಳ ಆಯ್ಕೆಯಾಗಿದ್ದಾರೆ.
ಪ್ರೆಸ್ ಕ್ಲಬ್ ಕಟ್ಟಡ ನಿರ್ಮಾಣಕ್ಕೆ ನಿವೇಶನ ಒದಗಿಸಲು ತಾಲೂಕು ಪಂಚಾಯತ್ ಪ್ರೆಸ್ ಕ್ಲಬ್ ವತಿಯಿಂದ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.