ಗೂನಡ್ಕ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಸಂಪಾಜೆ ಇದರ ವತಿಯಿಂದ ಬೆಂಗಳೂರಿನ ವೈಟ್ಫೀಲ್ಡ್ ನಲ್ಲಿರುವ ಹೋಟೆಲ್ ಫಾರ್ಚೂನ್ ಸೆಲೆಕ್ಟ್ ಟ್ರಿನಿಟಿಯಲ್ಲಿ ವಿಶಿಷ್ಟವಾದ ಬುದ್ಧಿಶಕ್ತಿಯನ್ನು ಅನಾವರಣಗೊಳಿಸಿ ಎಂಬ ವಿಷಯದಲ್ಲಿ ಮಾರ್ಚ್ 2೦ ರಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.
ತರಬೇತಿ ಕಾರ್ಯಾಗಾರವನ್ನು ಬಿಇಎಂಎಲ್ ನಿವೃತ್ತ ಮಾನವ ಸಂಪನ್ಮೂಲ ಕಾರ್ಯವಾಹಕ ನಿರ್ದೇಶಕರಾದ ಹಸನಬ್ಬ ಉದ್ಘಾಟಿಸಿದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ಸಜ್ಜನ ಪ್ರತಿಷ್ಠಾನದ ಬೀಜದಕಟ್ಟೆ ಅಧ್ಯಕ್ಷರಾದ ಡಾ.ಉಮ್ಮರ್ .ಬೀಜದಕಟ್ಟೆಯವರು ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ಎ.ಎ. ಪಾಟ್ನರ್ಸ್ ಹಿರಿಯ ನ್ಯಾಯವಾದಿ ಮಂಜುನಾಥ್ ಬಿ , ಹಿರಿಯ ಮಾನವ ಸಂಪನ್ಮೂಲ ಅಧಿಕಾರಿ ಇಸ್ಮಾಯಿಲ್ ಜಾರ, ಸಾಸ್ಮೋಸ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ರಾಜಶೇಖರ ರೈಯವರು ಭಾಗವಹಿಸಿದ್ದರು.
ಬೆಂಗಳೂರು ನಿರಾತಂಕ ಸಂಸ್ಥೆಯ ಎಂ.ಹೆಚ್ ರಮೇಶ್,ಇಂಟರ್ ಪ್ಲೆಕ್ಸ್ ಎಲೆಕ್ಟ್ರಾನಿಕ್ ಹೆಚ್ ಆರ್ ಮುಖ್ಯಸ್ಥ ವಾಸು, ಬೆಂಗಳೂರು ವೆರ್ ಹೌಸಿಂಗ್ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥ ಜೈಪ್ರಕಾಶ್, ಲಗೂನ ಕ್ಲೋತಿಂಗ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸದಾಶಿವ , ಬಿಎಫ್ಎ ಅಧ್ಯಕ್ಷ ಶ್ರೀ ನಟರಾಜ್ ,ಪ್ರಧಾನ ಕಾರ್ಯದರ್ಶಿ ಅಶ್ರಫ್ ಟರ್ಲಿ ಉಪಸ್ಥಿತರಿದ್ದರು.
ಖ್ಯಾತ ತರಬೇತುದಾರರಾದ ವಿಕ್ರಮ್ ಸಾಗರ್ ಸಕ್ಸೇನ ತರಬೇತಿಯನ್ನು ನೀಡಿದರು.
ರಾಜ್ಯದಾದ್ಯಂತ ನೂರಕ್ಕೂ ಅಧಿಕ ಮಂದಿ ಹಾಗೂ ಅಂತರಾಜ್ಯ ಮತ್ತು ವಿದೇಶದಿಂದ ಪ್ರತಿನಿಧಿಗಳು ಭಾಗವಹಿಸಿದ ತರಬೇತಿ ಕಾರ್ಯಾಗಾರ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯಿತು.
ಬಿಇಎಂಎಲ್ ಮೈಸೂರು ಮಾನವ ಸಂಪನ್ಮೂಲ ಅಧಿಕಾರಿ ಆಸೀಫ್ ಎಲಿಮಲೆ, ಮೊದಲಾದವರು ಉಪಸ್ಥಿತರಿದ್ದರು.
ಅಲ್ಡ್ರೀನ್ ಡಿಸೋಜ ಸ್ವಾಗತಿಸಿ ತಶ್ರೀಫ ಟರ್ಲಿ ವಂದಿಸಿದರು.
ಮಂಜುನಾಥ್ ಹಿರಿಯೂರ್, ಮಾಝಿನ್ ಬೀಜದಕಟ್ಟೆ, ಕಾರ್ಯಕ್ರಮದಲ್ಲಿ ಸಹಕರಿಸಿದರು.